ಕೋಲಾರಜಿಲ್ಲಾ ಸುದ್ದಿ
ಕೋಚಿಮುಲ್ ಹಾಲು ಒಕ್ಕೂಟ ವಿಭಜನೆ: ಸಂಪುಟದ ತೀರ್ಮಾನದಿಂದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಗೆ ಮುಖಭಂಗ

ಕೋಲಾರ: ಮೊದಲ ಭಾರಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಕೋಲಾರ ಜಿಲ್ಲೆಯಿಂದ ವಿಭಜಿಸಿ ಚಿಕ್ಕಬಳ್ಳಾಪುರ ಜಿಲ್ಲೆಯಾಗಿ ಮಾಡಲಾಯಿತು ಜಿಲ್ಲೆ ವಿಭಜನೆಯಾದರೂ ಡಿಸಿಸಿ ಬ್ಯಾಂಕ್ ಮತ್ತು ಹಾಲು ಒಕ್ಕೂಟ ಮಾತ್ರ ವಿಭಜನೆಯಾಗದೆ ಎರಡೂ ಜಿಲ್ಲೆಗಳಿಗೂ ಕೋಲಾರದಲ್ಲಿ ಕೋಚಿಮುಲ್ ಹಾಲು ಒಕ್ಕೂಟ ಅನ್ಯೋನ್ಯವಾಗಿ ನಡೆಸಲಾಗುತ್ತಿತ್ತು.
ಇತ್ತೀಚೆಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕೋಚಿಮುಲ್ ಮತ್ತು ಡಿಸಿಸಿ ಬ್ಯಾಂಕ್ ನಲ್ಲಿ ತನ್ನ ಪಾರುಪತ್ಯ ನಡೆಸಲು ಮುಂದಾದಾಗ ಅದು ಸಚಿವ ಸುಧಾಕರ್ ಕೆಂಗಣ್ಣಿಗೆ ಗುರಿಯಾಗಿ ಸಚಿವ ಸುಧಾಕರ್ ಮೊದಲ ಹಂತವಾಗಿ ಕೋಚಿಮುಲ್ ವಿಭಜಿಸಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಡೈರಿ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಇದರಿಂದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಗೆ ಮೊದಲ ಹಂತದಲ್ಲಿ ಹಿನ್ನಡೆಯಾಗಿದ್ದು, ಎರಡನೇ ಹಂತವಾಗಿ ಡಿಸಿಸಿ ಬ್ಯಾಂಕ್ ವಿಭಜನೆಯಲ್ಲಿ ಯಾರು ಮೇಲುಗೈ ಸಾಧಿಸಲಿದ್ದಾರೆ ಕಾದು ನೋಡಬೇಕಿದೆ.




