Breaking NewsLatestರಾಷ್ಟ್ರೀಯ
ಉಪಹಾರ್ ಅಗ್ನಿ ದುರಂತ: ಉದ್ಯಮಿಗಳಾದ ಅನ್ಸಾಲ್ ಸಹೋದರರಿಗೆ 7 ವರ್ಷ ಜೈಲು

ನವದೆಹಲಿ: 1997ರಲ್ಲಿ 59 ಮಂದಿಯ ಸಾವಿಗೆ ಕಾರಣವಾದ ದೆಹಲಿಯ ಉಪಾಹಾರ್ ಚಿತ್ರಮಂದಿರ ಅಗ್ನಿ ಅನಾಹುತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯವನ್ನು ತಿರುಚಿದ ಆರೋಪದ ಮೇಲೆ ಉದ್ಯಮಿ ಸಹೋದರರಾದ ಸುಶೀಲ್ ಅನ್ಸಾಲ್ ಮತ್ತು ಗೋಪಾಲ್ ಅನ್ಸಾಲ್ ಇಬ್ಬರಿಗೂ 7 ವರ್ಷಗಳ ಜೈಲುಶಿಕ್ಷೆ ವಿಧಿಸಲಾಗಿದೆ.
ಇದಲ್ಲದೆ, ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ ಇಬ್ಬರಿಗೂ ತಲಾ.2.25 ಕೋಟಿ ದಂಡವನ್ನೂ ವಿಧಿಸಿದೆ.
ಸಾಕ್ಷ್ಯ ತಿದ್ದಿದ ಆರೋಪದಲ್ಲಿ ಇಬ್ಬರನ್ನೂ ಅಪರಾಧಿಗಳೆಂದು ತಿಂಗಳ ಹಿಂದೆಯೇ ಘೋಷಿಸಲಾಗಿತ್ತು. ಇಂದು ಶಿಕ್ಷೆ ಪ್ರಮಾಣ ಪ್ರಕಟಿಲಾಗಿದೆ.
ಇಬ್ಬರೂ ಈಗಾಗಲೇ ಸುಪ್ರೀಂ ಕೋರ್ಟ್ ಆದೇಶದಂತೆ 2 ವರ್ಷ ಜೈಲುವಾಸ ಅನುಭವಿಸಿದ್ದರು. ಬಳಿಕ ತಲಾ 30 ಕೋಟಿ ದಂಡ ವಿಧಿಸಿ ಬಿಡುಗಡೆ ಮಾಡಲಾಗಿತ್ತು. ಆ ಹಣವನ್ನು ದೆಹಲಿಯಲ್ಲಿ ಟ್ರಾಮಾ ಕೇರ್ ಸೆಂಟರ್ ನಿರ್ಮಿಸಲಾಗಿತ್ತು.
