ಹುಬ್ಬಳ್ಳಿಯಲ್ಲಿ ಕನ್ನಡ ಪರ, ರೈತ ಪರ ಸಂಘಟನೆ ಸೇರಿದಂತೆ ಅಪ್ಪು ಅಭಿಮಾನಿಗಳಿಂದ ಸಂತಾಪ

ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರಮುಖ ಮಠಗಳಲ್ಲಿ ಒಂದಾದ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ಮಠ ಭಕ್ತರಾಗಿದ್ದ ಪವರ್ ಸ್ಟಾರ್ ಖ್ಯಾತಿ ನಟ ಪುನೀತ ರಾಜಕುಮಾರ್ ಅಕಾಲಿಕ ನಿಧನ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಕನ್ನಡ ಪರ ಸಂಘಟನೆ, ರೈತಪರ ಸಂಘಟನೆ ಹಾಗೂ ಅಪ್ಪು ಅಭಿಮಾನಿಗಳು ಸಂತಾಪ ಸೂಚಕ ಸಭೆ ಮಾಡಿದರು.
ನಗರದ ಹೃದಯ ಭಾಗದಲ್ಲಿರುವ ಚೆನ್ನಮ್ಮ ವೃತದಲ್ಲಿ ಚೆನ್ನಮ್ಮ ಪುತ್ಥಳಿ ಬಳಿಯಲ್ಲಿ ಪುನೀತ್ ರಾಜಕುಮಾರವರ ಭಾವ ಚಿತ್ರವಿಟ್ಟು ವಿಶೇಷ ಪೂಜೆ ಸಲ್ಲಿಸಿ ಶ್ರದ್ಧಾಂಜಲಿ ಸಭೆ ನಡೆಸಲಾಯಿತು. ಈ ವೇಳೆ ಎಲ್ಲ ಕನ್ನಡ ಪರ, ರೈತ ಪರ ಸೇರಿದಂತೆ ಪುನೀತ ಅಭಿಮಾನಿಗಳು ಭಾಗವಹಿಸಿ ಪುನೀತ ರಾಜಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಅಗಲಿದ ಯುರತ್ನನಿಗೆ ಭಾವ ಪೂರ್ಣ ನಮನ ಸಲ್ಲಿಸಿದರು.
ಶ್ರದ್ಧಾಜಲಿ ಸಭೆ ಬಳಿಕ ಪುನೀತ್ ರಾಜಕುಮಾರವರು ಉತ್ತರ ಕರ್ನಾಟಕ ಭಾಗದೊಂದಿಗೆ ಹಾಗೂ ಹುಬ್ಬಳ್ಳಿ ಶ್ರೀ ಸಿದ್ಧಾರೂಢ ಮಠದೊಂದಿಗೆ ಹೊಂದಿದ ನಂಟನ್ನು ಈ ವೇಳೆ ಮೆಲುಕು ಹಾಕಲಾಯಿತು. ಬಳಿಕ ಒಂದು ನಿಮಿಷ ಮೌನಾಚಾರಣೆ ಮಾಡುವ ಮಾಡಿ ಅಗಲಿದ ನಟ ಪೂನೀತ್ ರಾಜಕುಮಾರ್ ಆತ್ಮಕ್ಕೆ ಶಾಂತಿ ಕೋರಲಾಯಿತು.




