ಚನ್ನಪಟ್ಟಣದಲ್ಲಿ ಮತ್ತೊಮ್ಮೆ ಅಪರಿಚಿತ ಮೃತ ದೇಹದ ಅಂಗಗಳು ಪತ್ತೆ: ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ

ರಾಮನಗರ: ಚನ್ನಪಟ್ಟಣದಲ್ಲಿ ಮತ್ತೊಮ್ಮೆ ಸದ್ದು ಮಾಡಿದೆ ಅಪರಿಚಿತ ಮೃತ ದೇಹದ ಅಂಗಗಳು ಪತ್ತೆ. ನಗರದ ಮಂಗಳವಾರಪೇಟೆಯ 10ನೇ ಕ್ರಾಸ್ ನ ಕುಡಿಯುವ ನೀರಿನ ಪೈಪ್ ನಲ್ಲಿ ಮತ್ತೆ ಮಾಂಸದ ಮುದ್ದೆ ಮೂಳೆಗಳು ಪತ್ತೆಯಾಗಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಇತ್ತೀಚಿಗೆ ಕೆಲ ದಿನಗಳ ಹಿಂದೆ ಚನ್ನಪಟ್ಟಣ ನಗರದ ಕೋರ್ಟ್ ಬಳಿಯ ಓವರ್ ಹೆಡ್ ವಾಟರ್ ಟ್ಯಾಂಕ್ನಲ್ಲಿ ಅಪರಿಚಿತ ಮಹಿಳೆ ಶವದ ಕಾಲೊಂದು ಪತ್ತೆಯಾಗಿತ್ತು. ನೀರಿನ ಟ್ಯಾಂಕ್ ಬಳಿ ಮಹಿಳೆಯ ಬಟ್ಟೆ ಹಾಗೂ ಚಪ್ಪಲಿ ಪತ್ತೆಯಾಗಿತ್ತು.
ಟ್ಯಾಂಕ್ ಮೇಲೇರಿ ನೀರಿಗೆ ಬಿದ್ದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ…! ಅಥವಾ ಕೊಲೆ ಮಾಡಿ ದೇಹವನ್ನ ತುಂಡು ತುಂಡು ಮಾಡಿ ಟ್ಯಾಂಕಿನ ಒಳಗಡೆ ಹಾಕಿರಬಹುದೆಂದು ಶಂಕಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪಟ್ಟಣದ ಕೆಲ ಪ್ರದೇಶಗಳಿಗೆ ನೀರು ಪೂರೈಕೆ ಕೂಡ ಹಲವು ದಿನಗಳಿಂದ ಸ್ಥಗಿತಗೊಂಡಿತ್ತು.
ಕಳೆದ ಹಲವು ದಿನಗಳಿಂದ ಟ್ಯಾಂಕ್ನಿಂದ ನೀರು ಪೂರೈಕೆ ಸ್ಥಗಿತಗೊಳಿಸಿ. ಎಲ್ಲೆಲ್ಲಿ ವಾಲ್ ಪೈಪ್ ಗಳಿವೆ ಅಲ್ಲಲ್ಲಿ ಪೈಪುಗಳನ್ನು ಕತ್ತರಿಸಿ ದೇಹ ಒಂದು ವೇಳೆ ನೀರಿನ ಪೈಪ್ ನಲ್ಲಿ ಅಂಗಾಂಗಗಳು ಸಿಕ್ಕಿ ಹಾಕಿಕೊಂಡಿದೆಂದು ಹೊರ ತೆಗೆಯುವ ಕಾರ್ಯಾಚರಣೆ ನಡೆಯುತ್ತಿತ್ತು.
ಕಳೆದ 15 ದಿನಗಳ ಹಿಂದೆ ಕೋರ್ಟ್ ಪಕ್ಕದ ಓವರ್ ಟ್ಯಾಂಕ್ ನ ಪೈಪ್ ನಲ್ಲಿ ಕಾಲು ಪತ್ತೆಯಾಗಿ ಇಲ್ಲಿನ ಜನರನ್ನ ತೀವ್ರ ಆತಂಕಕ್ಕೀಡು ಮಾಡಿತ್ತು. ಇದೀಗ ಅದ್ರ ಕೂಗಳತೆ ದೂರದಲ್ಲಿನ ಪೈಪ್ ನಲ್ಲಿ ಮೂಳೆ ಹಾಗೂ ಮಾಂಸದ ಇಂದು ಮುದ್ದೆ ಪತ್ತೆಯಾಗಿರುವುದು ಆತಂಕ ಮೂಡಿಸಿದೆ.
ಜೆಸಿಬಿ ಮೂಲಕ ಪೈಪ್ ಶೋಧ ಕಾರ್ಯ ನಡೆಸಲಾಗುತ್ತಿದೆ ಸ್ಥಳಕ್ಕೆ ಪೊಲೀಸ್ ಇಲಾಖೆ ಹಾಗೂ ನಗರಸಭೆ ಹಾಗೂ ಕಾವೇರಿ ನೀರಾವರಿ ಇಲಾಖೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮಾಂಸದ ಮುದ್ದೆಯನ್ನ ಪೊಲೀಸರು ವಶಕ್ಕೆ ತೆಗೆದುಕೊಂಡು ಎಫ್ ಎಸ್ ಎಲ್ ಗೆ ಕಳುಹಿಸಿಕೊಟ್ಟಿದ್ದು, ಸ್ಥಳದಲ್ಲಿ ಕೊಳತ ಮಾಂಸ ವಾಸನೆಯಿಂದ ಸಾರ್ವಜನಿಕರು ಆತಂಕ್ಕೀಡಾಗಿದ್ದಾರೆ.
ಕಾರ್ಯಾಚರಣೆ ಇನ್ನು ಮುಂದು ವರೆದಿದ್ದು, ಸಿಕ್ಕ ಮಾಂಸದ ಮುದ್ದೆ ಅದೇ ಮಹಿಳೆಗೆ ಸೇರಿದೆಯೋ ಅಥವಾ ಬೇರೆಯವರಿಗೆ ಸೇರಿದೆಯೋ ಇನ್ನ ಗೊತ್ತಿಲ್ಲ. ಪೋಲೀಸರ ತನಿಖೆಯಿಂದ ಮಾತ್ರವಷ್ಟೆ ಬೆಳಕಿಗೆ ಬರಬೇಕಿದೆ.
ಕಾಲ್ಕಿತ್ತ ಇಂಜಿನಿಯರ್
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಜಲಮಂಡಳಿ ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ ವ್ಯಕ್ತಪಡಿಸಿದರು. ಒಂದು ತಿಂಗಳ ಹಿಂದೆ ಮತ್ತೊಂದು ಟ್ಯಾಂಕಿನಲ್ಲಿ ಮಹಿಳೆಯ ಕಾಲು ಪತ್ತೆಯಾಗಿತ್ತು. ಅಂದಿನಿಂದ ಇಂದಿನವರೆಗೂ ಟ್ಯಾಂಕುಗಳನ್ನು ಪರಿಶೀಲನೆ ಮಾಡದೆ ಏನ್ಮಡ್ತಿದ್ದೀರಿ ಎಂದು ನಾಗರೀಕರು ನೀರು ಸರಬರಾಜು ಮಮಡಳಿ ಅಧಿಕಾರಿಗಳಿಗೆ ಬಿಸಿಮುಟ್ಟಿಸಿದರು.
ಈ ಸಂದರ್ಭದಲ್ಲಿ ಜನರ ಪ್ರಶ್ನೆಗೆ ಉತ್ತರಿಸಲಾಗದೆ ಕರ್ನಾಟಕ ನೀರು ಸರಬರಾಜು ಮಂಡಳಿ ಎಇಇ ಗಂಗಾಧರಯ್ಯ ಕಾಲ್ಕಿತ್ತರು.




