ಚಿಕ್ಕಮಗಳೂರು

ಕುಸಿಯುವ ಹಂತದಲ್ಲಿ ಕಿರುಸೇತುವೆ : ದುರಸ್ತಿಗೆ ಆಗ್ರಹ

ಚಿಕ್ಕಮಗಳೂರು: ಅರವಿಂದ ನಗರದ ಚೌಡೇಶ್ವರಿ ದೇಗುಲದ ಬಳಿಯಿರುವ ಕಿರುಸೇತುವೆ ಕುಸಿಯುವ ಹಂತಕ್ಕೆ ತಲುಪಿದ್ದು, ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಇತ್ತ ಗಮನಹರಿಸಿ ಸೇತುವೆ ದುರಸ್ತಿಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಕಾಲುವೆಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಶಿಥಿಲಗೊಂಡಿದೆ. ಯಾವುದೇ ಸಂದರ್ಭದಲ್ಲಿ ಕುಸಿದು ಬೀಳುವ ಅಪಾಯ ಇದೆ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.

ಇತ್ತೀಚಿನ ದಿನಗಳಿಂದ ಕಾಲುವೆಗೆ ಕಸ, ಕಡ್ಡಿ ಇನ್ನಿತರೆ ತ್ಯಾಜ್ಯಗಳು ವಿಪರೀತವಾಗಿ ಎಸೆಯುತ್ತಿದ್ದು, ಇದರಿಂದ ಮಳೆನೀರು ಸರಾಗವಾಗಿ ಹರಿಯದೆ ಅನೇಕ ಅವಘಡಗಳು ಸಂಭಸುತ್ತಿವೆ. ಸೇತುವೆಗಳ ಬಳಿ ರಾಶಿ ರಾಶಿ ಕಸ ಕಟ್ಟುವುದು ಸಾಮಾನ್ಯ ಸಂಗತಿಯಾಗಿದೆ. ಕಾಲುವೆಗಳ ಅಸಮರ್ಪಕ ನಿರ್ವಹಣೆಯೂ ಇದಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button