ತೃತೀಯ ಪಂಚಮಸಾಲಿ ಪೀಠ ಸ್ಥಾಪನೆ; ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮನಗೂಳಿ ಮಠದ ಸಂಗನಬಸವ ಶ್ರೀ ಹೇಳಿಕೆ

ಬಾಗಲಕೋಟೆ: ರಾಜ್ಯದಲ್ಲಿ ತೃತೀಯ ಪಂಚಮಸಾಲಿ ಪೀಠ ಸ್ಥಾಪನೆ ವಿಚಾರಕ್ಕೆ ಮತ್ತೆ ಪರೋಕ್ಷವಾಗಿ ಪಂಚಮಸಾಲಿ ತೃತೀಯ ಪೀಠ ರಚನೆಯಾಗಬಹುದೆಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಬಾಗಲಕೋಟೆಯಲ್ಲಿ ವಿಜಯಪುರ ಜಿಲ್ಲೆ ಮನಗೂಳಿ ಹಿರೇಮಠದ ಸಂಗನಬಸವ ಶ್ರೀಗಳು ಹೇಳಿದರು.
ಬಾಗಲಕೋಟೆ ನಗರದಲ್ಲಿ ಪಂಚನಸಾಲಿ ಮಠಾಧೀಶರ ಒಕ್ಕೂಟದ ಶ್ರೀ ಸಂಗನಬಸವ ಶ್ರೀ ಮಾಧ್ಯಮಗಳೊಂದಿಗೆ ಮಾತನಾಡಿ, ನಾವು ಪಂಚಮಸಾಲಿ ಮಠಾಧೀಶರು ಒಕ್ಕೂಟವನ್ನು ಮಾಡಿಕೊಂಡು ಸಭೆಗಳನ್ನ ನಡೆಸುತ್ತಿದ್ದೇವೆ.ಬಾಗಲಕೋಟೆ, ಬೆಳಗಾವಿ, ವಿಜಯಪುರದಲ್ಲಿ ಮಾಡುತ್ತಿದ್ದೇವೆ. ಪರ್ಯಾಯ ಪೀಠವಲ್ಲ, ಆದ್ರೂ ರಾಜ್ಯದಲ್ಲಿರುವ ಒಂದುಕೋಟಿ ಐದರಿಂದ ಹತ್ತು ಲಕ್ಷ ಜನರು ಪಂಚಮಸಾಲಿಗಳು ಮತ್ತೊಂದು ಬಯಸಿದ್ರೆ ಪೀಠ ರಚನೆಯಾಗಬಹುದು ಎಂದು ಪರೋಕ್ಷವಾಗಿ ತೃತೀಯ ಪೀಠ ರಚನೆ ಕುರಿತು ಹೇಳಿಕೆ ನೀಡಿದರು.
ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಸ್ವಾಮೀಜಿ.ಸಿಎಂ ಬಸವರಾಜ ಬೊಮ್ಮಾಯಿ ಬಳಗ ಒಳ್ಳೆಯವರು.ಹಾಗೆ ಮಾಜಿ ಸಿಎಂ ಯಡಿಯೂರಪ್ಪ ಕೂಡ ಒಳ್ಳೆಯವರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೀಸಲಾತಿ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಈ ಹಿಂದೆ ಪಂಚಮಸಾಲಿ ಸಮಾಜದ ಇಬ್ಬರೂ ಶ್ರೀಗಳು ಪಾದಯಾತ್ರೆ ಮಾಡಿದ್ರು. ನಾವೂ ಒಕ್ಕೂಟದ ಶ್ರೀಗಳು ಭಾಗಿಯಾಗಿದ್ದೆವು.ಈ ಹಿಂದೆ ಬೊಮ್ಮಾಯಿ ಅವರು ಗೃಹಸಚಿವರಿದ್ದಾಗ ಮೀಸಲಾತಿ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದಾಗಿ ಹೇಳಿದ್ದರು. ಈಗ ಅವರೇ ಮುಖ್ಯಮಂತ್ರಿಗಳಾಗಿರೋದ್ರಿಂದ ೨ಎ ಮೀಸಲಾತಿ ಕೊಡಿಸಬೇಕೆಂದು ಆಗ್ರಹಿಸುತ್ತೇವೆ. ಬೆಳಗಾವಿಯ ಕಿತ್ತೂರು ಉತ್ಸವದ ಹಿನ್ನೆಲೆಯಲ್ಲಿ ಮೂರು ಬಾರಿ ಮುದ್ರಣಗೊಂಡ ಆಮಂತ್ರಣ ಪತ್ರಿಕೆ ವಿಚಾರಕ್ಕೆ ಕಿತ್ತೂರು ಚೆನ್ನಮ್ಮಾಜಿ ಕುಲಗುರು ಕಲ್ಮಠದ ಶ್ರೀಗಳನ್ನ ಕಡೆಗಣಿಸಬಾರದು.ಕಲ್ಮಠದ ಶ್ರೀಗಳು ಚೆನ್ನಮ್ಮಾಜಿ ಕುಲಗುರುಗಳು. ಚೆನ್ನಮ್ಮಾಜಿ ಕೇವಲ ಒಂದು ಸಮಾಜಕ್ಕೆ ಸೀಮಿತವಾದ ಮಹಿಳೆಯಲ್ಲ.ಎಲ್ಲರಿಗೂ ಬೇಕಾದ ದಿಟ್ಟ ಮಹಿಳೆ.ಎಲ್ಲರನ್ನೂ ಕರೆದುಕೊಂಡು ಜಯಂತಿ ಆಚರಣೆ ಮಾಡಬೇಕು.ಘಟನೆ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ.ಪಂಚಮಸಾಲಿ ಸ್ವಾಮೀಜಿಗಳಿಂದ ಜಮಖಂಡಿಯಲ್ಲಿಯೇ ಪದೇ ಪದೇ ಸಭೆ ಆಗ್ತಿರೋ ಬಗ್ಗೆ ಪ್ರಶ್ನೆಗೆ.ಎಲ್ಲಿ ಹೆಚ್ಚು ಗೌರವ ಸಿಗುತ್ತೋ ಅಲ್ಲಿ ಪ್ರಮುಖ ಪಾತ್ರ ಸಿಗುತ್ತದೆ.ಜಮಖಂಡಿಯಲ್ಲಿ ಎಲ್ಲರಿಗಿಂತ ಹೆಚ್ಚು ಹಿರಿಯರ ಬೆಂಬಲ ಸಿಗುತ್ತಿದೆ. ಜಮಖಂಡಿ ಭಾಗದ ಹಳ್ಳಿಗಳ ಜನರ ಬೆಂಬಲ ಬಹಳಷ್ಟು ಸಿಕ್ಕಿದೆ.ಹಾಗಾಗಿಯೇ ಜಮಖಂಡಿಯಲ್ಲಿ ಸಭೆಗಳು ಹೆಚ್ಚು ಆಗ್ತಿವೆ ಎಂದರು.




