ಮನರಂಜನೆಸಿನಿಮಾಸೆಲೆಬ್ರಿಟಿ
Madhuri Dixit: ಕಪ್ಪು ಸೀರೆಯಲ್ಲಿ ಅಭಿಮಾನಿಗಳ ಮನ ಸೆಳೆದ ನಟಿ ಮಾಧುರಿ ದೀಕ್ಷಿತ್

80-90ರ ದಶಕದಲ್ಲಿ ಇಡೀ ಬಾಲಿವುಡ್ ಅನ್ನೆ ಕುಳಿಸಿದ ನಾಟ್ಯ ಮಯೂರಿ ಮಾಧುರಿ ದೀಕ್ಷಿತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಸಕ್ರಿಯರಾಗಿದ್ದು, ತಮ್ಮ ಪೋಟೊ, ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಅವರು ಇನ್ ಸ್ಟಾಗ್ರಾಂನಲ್ಲಿ ಸರಣಿ ಪೋಟೊಗಳನ್ನು ಹಂಚಿಕೊಂಡು ಅಭಿಮಾನಿಗಳು ಬೋಲ್ಡ್ ಆಗುವಂತೆ ಮಾಡಿದ್ದಾರೆ.
ಈ ಫೋಟೊದಲ್ಲಿ ನಟಿ ಮಾಧುರಿ ಅವರು ಕಪ್ಪು ಬಣ್ಣದ ಸೀರೆಯನ್ನು ಧರಿಸಿದ್ದಾರೆ. ಸ್ಟ್ರಿಪ್ಡ್ ಮತ್ತು ಜೇನುಗೂಡಿನ ಮಾದರಿಯ ಸೀಕ್ವಿನ್ ಕಸೂತಿಯೊಂದಿಗೆ ಹೊಂದಿಕೊಳ್ಳುವ ಸ್ಲಿವ್ ಲೆಸ್ ಹಾಲ್ಟರ್ ನೆಕ್ ಬ್ಲೌಸ್ ಅನ್ನು ಧರಿಸಿದ್ದಾರೆ. ಅವರ ಸೀರೆಯ ಬಾಡರ್ ನಲ್ಲಿ ಗರಿಗಳನ್ನು ಅಲಂಕರಿಸಲಾಗಿದೆ.
ಹಾಗೇ ಅವರು ಈ ಫೋಟೊದಲ್ಲಿ ಪಚ್ಚೆ ಮತ್ತು ಬ್ಲೂಸ್ಟೋನ್ ಅಲಂಕರಿಸಿದ ಬಳೆಗಳು ಮತ್ತು ಪಚ್ಚೆ ಡ್ರಾಪ್ ಕಿವಿಯೋಲೆಗಳನ್ನು ಧರಿಸಿದ್ದಾರೆ. ಆಕೆಯ ಮೇಕಪ್ ಬಗ್ಗೆ ಹೇಳುವುದಾದರೆ ಅವರು ಕಂದು ಬಣ್ಣವನ್ನು ಕಣ್ಣುಗಳಲ್ಲಿ, ಮತ್ತು ಕೆಂಪಾದ ಬಣ್ಣವನ್ನು ಕೆನ್ನೆಗಳಿಗೆ ಹಚ್ಚಿದ್ದಾರೆ.




