ಆರೋಗ್ಯಲೈಫ್ ಸ್ಟೈಲ್
ಕಿವಿಯೊಳಗೆ ನೀರು ಹೋದರೆ ಹೀಗೆ ಮಾಡಿ..

ಪವಿತ್ರಾ ಶೆಟ್ಟಿ
ಸ್ನಾನ ಮಾಡುವಾಗ ಇಲ್ಲವೇ ನದಿ ಕಿನಾರೆಗಳಲ್ಲಿ ನೀರಿನಲ್ಲಿ ಆಡಿದ ಬಳಿಕ ಕಿವಿಯೊಳಗೆ ನೀರು ಹೋಗಿ ಗುಂಯ್ ಎಂಬ ಸದ್ದು ಮಾತ್ರ ಕೇಳಿಸುತ್ತದೆ. ಮಕ್ಕಳಿಗೆ ಮಾತ್ರವನ್ನು ದೊಡ್ಡವರಲ್ಲೂ ಕಾಡುವ ಈ ಸಮಸ್ಯೆಯನ್ನು ನಿರ್ಲಕ್ಷಿಸದಿರಿ.
ಕಿವಿಯೊಳಗೆ ನೀರು ಹೊಕ್ಕರೆ ಕಿವಿ ಸರಿಯಾಗಿ ಕೇಳುವುದಿಲ್ಲ. ಸೋಂಕಾದರೆ ತಲೆ ನೋವು, ತುರಿಕೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಈ ನೀರನ್ನು ತಕ್ಷಣ ಹೊರತೆಗೆಯುವುದು ಬಹಳ ಮುಖ್ಯ.
ಒಂಟಿ ಕಾಲಿನಲ್ಲಿ ನಿಂತು, ಯಾವ ಕಿವಿಯೊಳಗೆ ನೀರು ಹೋಗಿದೆಯೋ ಆ ಭಾಗಕ್ಕೆ ಬಗ್ಗಿ ಕುಪ್ಪಳಿಸುವುದರಿಂದ ನೀರು ನಿಧಾನಕ್ಕೆ ಹೊರಬರುತ್ತದೆ. ನೀರಿ ಹೋದ ಕಿವಿಯ ಭಾಗಕ್ಕೆ ಮಲಗಿಕೊಂಡರೂ ಅದು ಹರಿದು ಹೋಗುತ್ತದೆ.
ಎರಡೂ ಕಿವಿಗಳನ್ನು ಅಂಗೈಯಿಂದ ಮುಚ್ಚಿ ಗಾಳಿ ಒಳಹೋಗದಂತೆ ಮಾಡಿದರೆ ನೀರು ಹೊರಬರುತ್ತದೆ. ದೀರ್ಘ ಉಸಿರನ್ನು ಒಳತೆಗೆದುಕೊಂಡು ಹೊರಬಿಡುವಾಗ ಮೂಗು ಹಾಗೂ ಬಾಯನ್ನು ಮುಚ್ಚಿದರೂ ಕಿವಿಯಿಂದ ನೀರು ಹೊರಬರುತ್ತದೆ




