ಜಿಲ್ಲಾ ಸುದ್ದಿಬೆಳಗಾವಿ

ನಿಪ್ಪಾಣಿಯಲ್ಲಿ ಬಂಡಿ ಸವಾರಿಯೊಂದಿಗೆ ಆಗಮಿಸಿದ ಕೃಷಿ ಸಚಿವ ಬಿ ಸಿ ಪಾಟೀಲ್

ಬೆಳಗಾವಿ: ತುಂತುರು ಮಳೆಯಲ್ಲೂ ಎತ್ತಿನಬಂಡಿ ಏರಿ ಅದ್ದೂರಿ ಮೆರವಣಿಗೆಯಲ್ಲಿ ಬಂದ ಕೃಷಿ ಸಚಿವ ಬಿ.ಸಿ.ಪಾಟೀಲ್​​ ಅವರು ಕಬ್ಬಿನ ನಾಟಿ ಮಾಡಿ ಗಮನ ಸೆಳೆದು, ರೈತರೊಂದಿಗೆ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ‌

ನಿಪ್ಪಾಣಿ ತಾಲೂಕಿನ ಭೀವಶಿಯಲ್ಲಿ ರೈತರು ಹಾಗೂ ರೈತರ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ಉತ್ಸಾಹದಿಂದಲೇ ನರಸಿಂಹ ಚೌಗುಲೆ ಅವರ ಕಬ್ಬಿನ ಗದ್ದೆಗಿಳಿದು ರೈತರಲ್ಲಿ ಪ್ರೋತ್ಸಾಹ ತುಂಬಿದರು.

ವಿವಿಧ ಜಾನಪದ ಕಲಾ ತಂಡಗಳು, ಮುತ್ತೈದೆಯರ ಕುಂಭಮೇಳ ಮೆರವಣಿಗೆ ಕಳೆ ಹೆಚ್ಚಿಸಿದವು. ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ್ ಜೊಲ್ಲೆ ಇತರರು ಸಚಿವರಿಗೆ ಉಪಸ್ಥಿತರಿದ್ದರು.

ನಿಪ್ಪಾಣಿ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಇಂದು ಭೇಟಿ ನೀಡಲಿರುವ ಕೃಷಿ ಸಚಿವರು, ಇಡೀ ದಿನ ರೈತರೊಂದಿಗೆ ಕಳೆಯಲಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button