ರಾಮನಗರ

ಕನಕಪುರದಲ್ಲಿ ಚಿರತೆ ಸೆರೆ

ರಾಮನಗರ: ಕನಕಪುರ ತಾಲೂಕಿನ ಕಬ್ಬಾಳು ಅರಣ್ಯ ಪ್ರದೇಶದ ತೈಲೂರು ಅರಣ್ಯದಲ್ಲಿ ರೈತರ ಹಸು-ಕುರಿಗಳನ್ನು ತಿಂದು ಕಿರಿಕಿರಿ ಉಂಟುಮಾಡುತ್ತಿದ್ದ ಚಿರತೆಯೊಂದನ್ನು ಸಾತನೂರು ವಲಯ ಅರಣ್ಯಾಧಿಕಾರಿಗಳು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಳೆದ ಒಂದು ತಿಂಗಳಿನಿಂದ ವೆಂಕಟರಾಯನದೊಡ್ಡಿ, ಕುರುಬಳ್ಳಿ, ಬುಕ್ಕಸಾಗರ ಗ್ರಾಮಗಳ ಸುತ್ತಮುತ್ತ ದನ, ಕರು, ಮೇಕೆ, ಕುರಿಗಳ ಮೇಲೆ ಧಾಳಿ ಮಾಡಿ ತಿಂದು ಹಾಕುತ್ತಿದ್ದ ಚಿರತೆಯ ಅವಾಂತರಕ್ಕೆ ರೈತರು ಹೈರಾಣಾಗಿ ಹೋಗಿದ್ದರು. ರೈತರ ದೂರಿನ ಮೇರೆಗೆ ಕಳೆದ ಐದು ದಿನಗಳ ಹಿಂದೆ ಅರಣ್ಯ ಇಲಾಖೆ ಚಿರತೆ ಹಿಡಿಯಲು ವೆಂಕಟರಾಯನದೊಡ್ಡಿ ಬಳಿಯ ಕೋಳಿ ಫಾರಂ ಸಮೀಪದಲ್ಲಿ ಬೋನನ್ನು ಇಟ್ಟಿದ್ದರು.

ಬೆಳಿಗ್ಗೆ ೮:೩೦ ರ ಸಮಯದಲ್ಲಿ ಚಿರತೆ ಬೋನಿಗೆ ಬಿದ್ದಿದೆ. ಆರ್.ಎಫ್.ಒ. ದಾಳೇಶ್ ನೇತೃತ್ವದಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ಡಿ.ಆರ್.ಎಫ್.ಒ. ಮುತ್ತುಸ್ವಾಮಿ, ಅರಣ್ಯ ರಕ್ಷಕರದ ಕಾಂತರಾಜು, ರಿಜ್ವಾನ್ ಮತ್ತು ಸಿಬ್ಬಂಧಿಗಳು ಚಿರತೆಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಎ.ಸಿ.ಎಫ್. ದೇವರಾಜು ವಿ. ಮರ್ಗದರ್ಶನದಲ್ಲಿ ಬೋನಿಗೆ ಬಿದ್ದ ಚಿರತೆಯನ್ನು ಸಂರಕ್ಷಿಸಿ ಸಂಗಮ ಕಾವೇರಿ ವನ್ಯಜೀವಿ ವಿಭಾಗದ ಹೈರಾ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.

Spread the love

Related Articles

Leave a Reply

Your email address will not be published. Required fields are marked *

Back to top button