Latestಜಿಲ್ಲಾ ಸುದ್ದಿಹುಬ್ಬಳ್ಳಿ - ಧಾರವಾಡ

Leopard: ಧಾರವಾಡದ ಕವಲಗೇರೆಯಲ್ಲಿ ಬೋನಿಗೆ ಬಿದ್ದ ಚಿರತೆ: ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ಬೆಳಗಾವಿ: ಕಳೆದ ಸೆ.20 ರಿಂದ ಧಾರವಾಡದ ಕವಲಗೇರಿ ಗ್ರಾಮದಲ್ಲಿ ಬೀಡು ಬಿಟ್ಟಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಚಿರತೆಯ ಪತ್ತೆಗಾಗಿ ಅಧಿಕಾರಿಗಳು ಕಳೆದ ಐದು ದಿನಗಳಿಂದ ನಿರಂತರವಾಗಿ ಕಾರ್ಯಚರಣೆ ನಡೆಸುತ್ತಾ ಬಂದಿದ್ದರು. ಆದರೆ ಕಳೆದ ದಿನ ತಡ ರಾತ್ರಿ ಚಿರತೆಯು ಬೋನಿಗೆ ಬಿದಿದ್ದು, ಐದು ದಿನಗಳ ಸತತ ಚೀತಾ ಆಪರೇಷನ್ ಕೊನೆಗೂ ಇಂದು ಯಶಸ್ವಿಯಾಗಿದೆ.

ಐದು ದಿನಗಳ ಹಿಂದೆ ಧಾರವಾಡದ ಕವಲಗೇರಿ ಗ್ರಾಮದ ರೈತ ಮಾಹಾಂತೇಶ ಪಾಟೀಲ್ ಅವರಿಗೆ ಚಿರತೆಯು ಕಾಣಿಸಿಕೊಂಡಿತ್ತು. ನಂರತ ಚಿರತೆಯು ಶಿವಾನಂದ ಎಂಬುವವರು ಕಬ್ಬಿನ ಹೊಲದಲ್ಲಿ ಚಿರತೆಯು ಬೀಡು ಬಿಟ್ಟಿತ್ತು. ಕೂಡಲೇ ಗ್ರಾಮಸ್ಥರು ಚಿರತೆಯ ಪ್ರತ್ಯಕ್ಷ ಕುರಿತು ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅರಣ್ಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸೆ.21 ರಂದು ಚಿರತೆಯ ಪತ್ತೆಗಾಗಿ ಕಾರ್ಯಚರಣೆ ನಡೆಸಿದರು.

ಇನ್ನೂ ಚಿರತೆಯ ಪ್ರತ್ಯಕ್ಷವಾದ ಸುದ್ದಿ ಗ್ರಾಮದಲ್ಲಿ ಹರಡುತ್ತಿದಂತೆ ಗ್ರಾಮದಲ್ಲಿ ಆತಂಕ ಮನೆ ಮಾಡಿತ್ತು. ಮುಂಜಾಗ್ರತಾ ಕ್ರಮವಾಗಿ ಕನಕೂರ ಗ್ರಾಮ ಪಂಚಾಯತಿ ಅಧಿಕಾರಿಗಳು ಗ್ರಾಮಸ್ಥರಿಗೆ ಜಾಗೃತಿ ಮೂಡಿಸಿದರು. ಆದರೆ ಅಂದು ಪ್ರತ್ಯಕ್ಷವಾಗಿದ್ದ ಚಿರತೆ ಮತ್ತೆ ಕಾಣಲಿಲ್ಲ ಹಾಗೂ ಯಾವುದೇ ಕುರುಹುಗಳು ಸಿಗದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತ ಮಾಡಲಾಗಿತ್ತು. ಆದರೆ‌ ಮತ್ತೆ ಸಂಜೆ ವೇಳೆಗೆ ಶಿವಾನಂದ ಮಾಳಶೆಟ್ಟಿಯವರ ಕಬ್ಬಿನ ಜಮೀನಿನಲ್ಲಿ ಚಿರತೆಯು ಹಸುವಿನ ಭೇಟೆಗೆ ಹೊಂಚ ಹಾಕಿತ್ತು. ಇದನ್ನು ನೋಡಿದ ರೈತ ಮಾರುತಿ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿ ನೀಡಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ವಲಯ ಅರಣ್ಯ ಅಧಿಕಾರಿ ಆರ್ ಎಸ್ ಉಪ್ಪಾರ ನೇತೃತ್ವದ ತಂಡ ನಿರಂತರ ಕಾರ್ಯಾಚರಣೆಯ ನಡೆಸಿ ಚಿರತೆಯನ್ನು ಬೋನಿಗೆ ಕೊಡುವಲ್ಲಿ ಯಶಸ್ವಿಯಾಗಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ‌.

ಕವಲಗೇರಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾದ ಬಳಿಕ ಸ್ಥಳೀಯರ ಹಾಗೂ ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಪಡೆದುಕೊಂಡು ವಲಯ ಅರಣ್ಯ ಇಲಾಖೆಯ ಅಧಿಕಾರಿ ಆರ್ ಎಸ್ ಉಪ್ಪಾರ ಹಾಗೂ ಡಿಎಒಪ್ ಓ ಯಶಪಾಲ್ ಕ್ಷೀರಸಾಗರ ನೇತೃತ್ವದ ಐವತ್ತಕ್ಕೂ ಹೆಚ್ಚು ಸಿಬ್ಬಂದಿ ತಂಡದಿಂದ ಚೀತಾ ಆಪರೇಷನ್ ಕಾರ್ಯವನ್ನು ಆರಂಭಿಸಲಾಗಿತ್ತು. ಇನ್ನೂ ಈ ಕಾರ್ಯಾಚರಣೆಯಲ್ಲಿ ರ‍್ಯಾಪಿಡ್ ರೆಸ್ಪಾನ್ಸ್ ಯುನಿಟ್ ಟೀಂ, ಗದಗ ಮೃಗಾಲಯ ಟೀಂ, ಹಾವೇರಿಯ ಅರಣ್ಯ ಇಲಾಖೆಯ ಅಧಿಕಾರಿಗಳು, ಅಗ್ನಿ ಶಾಮಕದಳ ಸಿಬ್ಬಂದಿಗಳು ಸಹ ಪಾಲ್ಗೊಂಡಿದ್ದರು. ಶಿವಾನಂದ ಮಾಳಶೆಟ್ಟಿಯವರ ಸುಮಾರು 35 ಎಕರೆ ಜಮೀನಿನ ಕಬ್ಬನಿನಲ್ಲಿ ಬೀಡು ಬಿಟ್ಟಿದ್ದ ಚಿರತೆಯ ಸೆರೆಗಾಗಿ ಎರಡು ಬೋನಗಳನ್ನು ಇಟ್ಟು ಕಾರ್ಯಚಾರಣೆ ನಡೆಸಲಾಗಿತ್ತು. ಎಲ್ಲ ಅಧಿಕಾರಿಗಳ ಪರಿಶ್ರಮದಿಂದ ಈಗ ಚಿರತೆಯು ಬೋನಿಗೆ ಬಿದಿದ್ದೆ.

ಸತತ ಐದು ದಿನಗಳ ಚೀತಾ ಆಪರೇಷನ್ ಯಶಸ್ವಿ

ಸೆ.20 ರಿಂದ ಚಿರತೆಯ ಸೆರೆಗಾಗಿ ನಡೆಸಿಕೊಂಡು ಬರಲಾಗುತ್ತಿದ್ದ ಚೀತಾ ಆಪರೇಷನ್ ಕಾರ್ಯವು ಐದು ದಿನಗಳ ಬಳಿಕ ಚಿರತೆಯು ಬೋನಿಗೆ ಬೀಳುವ ಮೂಲಕ ಯಶಸ್ವಿಯಾಗಿದೆ. ಕಬ್ಬಿನ ಗದ್ದೆಯಲ್ಲಿ ಕಳೆದು ನಾಲ್ಕು ದಿನಗಳಿಂದ ಬೀಡು ಬಿಟ್ಟು ಒಂದು ದಿನ ಸ್ಥಳ ಬದಲಿ ಮಾಡಿದ ಚಿರತೆಯು, ಸುಮಾರು 35 ಎಕರೆ ಮತ್ತೊಂದು ಕಬ್ಬಿನ ಗದ್ದೆಗೆ ನುಗ್ಗಿ ಅಲಿಯೇ ಬೀಡು ಬಿಟ್ಟಿತ್ತು. ಅಲ್ಲದೆ ಜಮೀನಿನಲ್ಲಿ ಚಿರತೆಯ ಹೆಜ್ಜೆ ಗುರುತುಗಳು ಕೂಡಾ ಕಂಡು ಬಂದಿದವು. ಕುರುಹುಗಳನ್ನು ಆಧರಿಸಿ ಹಗಲು ರಾತ್ರಿ ಎನ್ನದೇ ನಿರಂತರ ಚೀತಾ ಆಪರೇಷನ್ ನಡೆಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯನ್ನು ಜೀವಂತವಾಗಿ ಹಿಡಿಯುವಲ್ಲಿ ಯಶಸ್ಸು ಕಂಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button