ಕೋಲಾರಜಿಲ್ಲಾ ಸುದ್ದಿ

Kolar : ಮಲೆನಾಡಾಗಿ ಮಾರ್ಪಟ್ಟ ಕೋಲಾರ : ಬರದ ನಾಡೀಗ ಹಸಿರಿನ ಬೀಡು

ಕೋಲಾರ: ಸತತ ಬರಗಾಲಕ್ಕೆ ತುತ್ತಾಗಿ ಹನಿ ಹನಿ ನೀರಿಗೂ ಪರಿತಪಿಸುತ್ತಿದ್ದ ಜಿಲ್ಲೆ ಕೋಲಾರ ಬರದನಾಡು ಅಂತಾನೆ ಹೆಸರು ಪಡೆದಿತ್ತು. ಬರದ ನಾಡೀಗ ಕಳೆದೆರಡು ವರ್ಷಗಳಿಂದ ಬಿದ್ದಂತಹ ಮಳೆಗೆ ಜಿಲ್ಲೆಯಾದ್ಯಂತ ಕೆರೆ ಕುಂಟೆಗಳು ತುಂಬಿ ಕೋಡಿ ಹರಿಯುತ್ತಿವೆ. ಇನ್ನು ಬೆಟ್ಟಗಳ ತಪ್ಪಲುಗಳಲ್ಲಂತೂ ಜಿನಿ ಜಿನಿ ಹರಿಯುವ ನೀರು ಜಿಲ್ಲೆಯ ಪ್ರಕೃತಿಯ ಸೌಂದರ್ಯವನ್ನೇ ಹೆಚ್ಚಿಸಿದೆ.

ಸಾವಿರಾರು ಅಡಿ ಕೊಳವೆ ಬಾವಿಗಳನ್ನು ತೋಡಿಸಿದರೂ ನೀರು ಸಿಗುತ್ತಿರದ ಜಿಲ್ಲೆಯಲ್ಲೀಗ ಬಾವಿಗಳು ಹತ್ತಾರು ಅಡಿಯ ಬಾವಿಗಳಲ್ಲಿ ನೀರು ಉತ್ಪತ್ತಿಯಾಗುತ್ತಿವೆ. ಪ್ಲೋರೈಡ್ ಯುಕ್ತ ಕೊಳವೆ ಬಾವಿಗಳಲ್ಲಿನ ನೀರನ್ನು ಯಂತ್ರಗಳ ಮುಖಾಂತರ ಶುದ್ದೀಕರಿಸಿ ಕುಡಿಯುತ್ತಿದ್ದ ಜನ ಈಗ ನೈಸರ್ಗಿಕವಾಗಿ ಹಳೆಯ ಸೇತು ಬಾವಿಗಳಲ್ಲಿ ಲಭ್ಯವಾಗುತ್ತಿರುವ ನೈಸರ್ಗಿಕವಾದ ಶುದ್ದ ನೀರನ್ನು ಕುಡಿಯಲು ಮುಂದಾಗುತ್ತಿದ್ದಾರೆ.

ಕಳೆದ ಇಪ್ಪತ್ತು ವರ್ಷಗಳ ಹಿಂದಿನ ಜಿಲ್ಲೆಯ ನಿಸರ್ಗ ಈ ಭಾರಿ ಮರುಕಳಿಸುತ್ತಿದ್ದು ಬಹುಶಃ ಬರದನಾಡೀಗ ಮಲೆನಾಡಾಗಿ ಮಾರ್ಪಡುತ್ತಿದೆ. ಬೆಟ್ಟದ ತಪ್ಪಲುಗಳಲ್ಲಿ ಹಚ್ಚ ಹಸಿರಿನ ಗಿಡ ಮರಗಳ ನಡುವೆ ಹರಿದು ಬರುತ್ತಿರುವ ನೀರು ನೋಡುವ ಜನರ ಕಣ್ಣು ಕುಕ್ಕುವಂತಾಗುತ್ತದೆ.

Spread the love

Related Articles

Leave a Reply

Your email address will not be published. Required fields are marked *

Back to top button