ಆರೋಗ್ಯಮನರಂಜನೆಲೈಫ್ ಸ್ಟೈಲ್ಸಿನಿಮಾಸೆಲೆಬ್ರಿಟಿ

ಕತ್ರಿನಾ ಕೈಫ್ ತನ್ನ 38ನೇ ವಯಸ್ಸಿನಲ್ಲಿ ಫಿಟ್ ಆಗಿರಲು ಬೆಳಿಗ್ಗೆ ಯೋಗದ ಜೊತೆಗೆ ಈ ಕೆಲಸ ಮಾಡುತ್ತಾರಂತೆ

ಕತ್ರಿನಾ ಕೈಫ್ ತನ್ನ ಸೌಂದರ್ಯ ಹಾಗೂ ಫಿಟ್ ನೆಸ್ ಗೆ ಹೆಸರುವಾಸಿಯಾಗಿದ್ದಾರೆ. ಬಾಲಿವುಡ್ ನ ಫಿಟೆಸ್ಟ್ ನಟಿಯರಲ್ಲಿ ಕತ್ರಿನಾ ಅಗ್ರಸ್ಥಾನದಲ್ಲಿದ್ದಾರೆ. ಇದೀಗ ಅವರ ಫಿಟ್ ನೆಸ್ ರಹಸ್ಯ ಬಯಲಾಗಿದೆ. ಅದೇನೆಂಬುದನ್ನು ತಿಳಿಯೋಣ.

ಕತ್ರಿನಾ ಎಷ್ಟೇ ಬ್ಯುಸಿ ಇದ್ದರೂ ಕೂಡ ವರ್ಕೌಟ್ ಮಾಡುವುದನ್ನು ತಪ್ಪಿಸುವುದಿಲ್ಲವಂತೆ. ಕತ್ರಿನಾ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳಲು ಜೀವನಕ್ರಮದ ಜೊತೆಗೆ ಆರೋಗ್ಯಕರ ಆಹಾರವನ್ನು ಅನುಸರಿಸುತ್ತಾಳಂತೆ. ಅವರು ಪ್ರತಿದಿನ ವ್ಯಾಯಾಮ ಮಾಡುತ್ತಾರಂತೆ. ಅದರ ಜೊತೆಗೆ ಕಾರ್ಡಿಯೋ, ಕೆಟಲ್ ಬೆಲ್ಸ್, ಪವರ್ ಪ್ಲೇಟ್ ನಂತಹ ಇನ್ನೂ ಹಲವು ವ್ಯಾಯಾಮಗಳನ್ನು ಮಾಡುತ್ತಾರೆ. ಕತ್ರಿನಾ ಪ್ರತಿದಿನ ವರ್ಕೌಟ್ ಮಾಡುತ್ತಾರಂತೆ.

ಅಲ್ಲದೇ ಕತ್ರಿನಾ ಅವರು ತಮ್ಮ ದೇಹದ ಆಕಾರವನ್ನು ಉಳಿಸಿಕೊಳ್ಳಲು ಕಠಿಣ ಆಹಾರವನ್ನು ಅನುಸರಿಸುತ್ತಾಳಂತೆ. ಇವರು ಬೆಳಿಗ್ಗೆ ಎದ್ದ ತಕ್ಷಣ 4 ಗ್ಲಾಸ್ ನೀರು ಕುಡಿಯುತ್ತಾಳೆ. ಇದರ ಹೊರತಾಗಿ ಕತ್ರಿನಾ ಮ್ಯಾಕ್ರೋಬಯೋಟಿಕ್ ಆಹಾರವನ್ನು ತೆಗೆದುಕೊಳ್ಳುತ್ತಾಳೆ. ಅದರಲ್ಲಿ ಅವರು ಬೇಯಿಸಿದ ತರಕಾರಿಗಳನ್ನು ತಿನ್ನುತ್ತಾಳೆ.

ಪ್ರತಿ ಗಂಟೆಗಳಿಗೊಮ್ಮೆ ಹಣ್ಣುಗಳನ್ನು ತಿನ್ನುತ್ತಾಳೆ. ಬೆಳಿಗ್ಗೆ ಬ್ರೇಕ್ ಫಾಸ್ಟ್ ಗೆ ಓಟ್ ಮೀಲ್, ಮೊಟ್ಟೆಯ ಬಿಳಿ ಭಾಗ, ದಾಳಿಂಬೆ ರಸ ತೆಗೆದುಕೊಳ್ಳುತ್ತಾರಂತೆ. ಮಧ್ಯಾಹ್ನ ಊಟದಲ್ಲಿ ಅನ್ನ, ಬೇಳೆ, ಸಲಾಡ್ ತಿನ್ನುತ್ತಾರಂತೆ. ಮತ್ತು ರಾತ್ರಿ ಊಟಕ್ಕೆ ಬೇಯಿಸಿದ ತರಕಾರಿ ಮತ್ತು ಸಲಾಡ್ ಸೇವಿಸುತ್ತಾರಂತೆ.

Spread the love

Related Articles

Leave a Reply

Your email address will not be published. Required fields are marked *

Back to top button