ಕಲಬುರ್ಗಿಜಿಲ್ಲಾ ಸುದ್ದಿ
ದನದ ಕೊಟ್ಟಿಗೆಗೆ ಬೆಂಕಿಯಿಟ್ಟ ದುಷ್ಕರ್ಮಿಗಳು: 24 ಜಾನುವಾರಗಳಿಗೆ ಗಂಭೀರ ಗಾಯ

ಕಲಬುರಗಿ: ದನದ ಕೊಟ್ಟಿಗೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ಚಿಂಚೋಳಿ ತಾಲೂಕಿನ ಕುಂಚಾವರಂ ಗ್ರಾಮದಲ್ಲಿ ತಡರಾತ್ರಿ ನಡೆದಿದ್ದು, ಘಟನೆಯಲ್ಲಿ 24 ಜಾನುವಾರುಗಳು ಗಂಭೀರವಾಗಿ ಗಾಯಗೊಂಡಿವೆ. ಕುಂಚಾವರಂ ಗ್ರಾಮದ ಅಮೃತಮ್ಮ ಬಿಚ್ಚಪ್ಪ ಎಂಬುವರಿಗೆ ಸೇರಿರುವ ದನದ ಕೊಟ್ಟಿಗೆ ಇದಾಗಿದ್ದು, ಕಿಡಿಗೇಡಿಗಳು ಕೊಟ್ಟಿಗೆಗೆ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ.
ಘಟನೆ ವೇಳೆ ಕೊಟ್ಟಿಗೆಯಲ್ಲಿ ಸುಮಾರು 30 ಜಾನುವಾರುಗಳಿದ್ದವು, ಎಲ್ಲವನ್ನು ರಕ್ಷಿಸಲಾಗಿದೆ. ಈ ವೇಳೆ 20 ಹಸುಗಳು, 4 ಕರುಗಳು ಸೇರಿದಂತೆ 24 ಜಾನುವಾರುಗಳಿಗೆ ಸುಟ್ಟು ಗಾಯಗಳಾಗಿವೆ. ಸ್ಥಳೀಯರ ಸಹಾಯದಿಂದ ಬೆಂಕಿ ನಂದಿಸಿದ ಕೊಟ್ಟಿಗೆ ಮಾಲೀಕ ಅಮೃತಮ್ಮ ಬಿಚ್ಚಪ್ಪ, ಕುಂಚಾವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ಉಪಜೀವನಕ್ಕೆ ಜೊಡಿಯಾಗಿದ್ದ ಜಾನುವಾರಿಗಳು ಸುಟ್ಟು ಗಂಭೀರ ಸ್ಥೀತಿಯಲ್ಲಿ ಮುಖರೋಧನೆ ಅನುಭವಿಸುತ್ತಿರುವದನ್ನು ಕಂಡು ಬಡ ರೈತ ಬಿಚ್ಚಪ್ಪ ಹಾಗೂ ಅಮೃತಮ್ಮ ಕಣ್ಣಿರು ಹಾಕುತ್ತಿದ್ದಾರೆ.




