ಮನರಂಜನೆಸಿನಿಮಾಸೆಲೆಬ್ರಿಟಿ

Samantha: ವಿಚ್ಚೇದನ ಬಗ್ಗೆ ಕೇಳಿದ ಪತ್ರಕರ್ತರಿಗೆ ನಟಿ ಸಮಂತಾ ಹೇಳಿದ್ದೇನು ಗೊತ್ತಾ?

ನಟಿ ಸಮಂತಾ ಅವರು ಚಲನಚಿತ್ರಗಳಿಂದ ಸ್ವಲ್ಪ ವಿರಾಮ ತೆಗೆದುಕೊಂಡು ಸೆಪ್ಟೆಂಬರ್ 18 ರಂದು ಬೆಳಿಗ್ಗೆ ತಿರುಪತಿಗೆ ಭೇಟಿ ನೀಡಿದ್ದಾರೆ. ಅಲ್ಲಿ ತಿರುಪತಿ ವೆಂಕಟೇಶ್ವರ ಆಶೀರ್ವಾದ ಪಡೆಯಲು ದೇವಸ್ಥಾನಕ್ಕೆ ತೆರಳಿದ್ದಾರೆ.

ದೇವರ ದರ್ಶನಕ್ಕೆ ತೆರಳಿದ ನಟಿ ಅಲ್ಲಿ ತನ್ನ ಮತ್ತು ತನ್ನ ತಂಡದ ಪೋಟೊವನ್ನು ಹಂಚಿಕೊಳ್ಳುವ ಮೂಲಕ ತಾವು ತಿರುಪತಿ ವೆಂಕಟೇಶ್ವರನ ಸನ್ನಿಧಾನದಲ್ಲಿರುವುದನ್ನು ದೃಢಪಡಿಸಿದ್ದಾರೆ. ಆ ವೇಳೆ ನಟಿ ಪಚ್ಚೆ ಹಸಿರು ಶಾಲ್ ಧರಿಸಿ ಹಣೆಯ ತಿಲಕನ್ನಿಟ್ಟುಕೊಂಡಿದ್ದರು.

ದೇವಾಲಯದ ಆವರಣದಲ್ಲಿ ನಡೆಯುತ್ತಿರುವಾಗ ಸ್ಥಳೀಯ ಪತ್ರಕರ್ತರು ಅವರನ್ನು ಸುತ್ತುವರಿದು, ವಿಚ್ಛೇದನದ ಬಗ್ಗೆ ಕೇಳಿದ್ದಾರೆ. ಆಗ ನಟಿ ಪತ್ರಕರ್ತರನ್ನು ತರಾಟೆಗೆ ತೆಗೆದುಕೊಂಡು , ” ನಾನು ದೇವಸ್ಥಾನಕ್ಕೆ ಬಂದಿದ್ದೇನೆ, ನಿಮಗೆ ಬುದ್ಧಿ ಇಲ್ಲವಾ?” ಎಂದು ಕೆಂಡಕಾರಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚರ್ಚೆಯ ವಿಷಯವಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button