ಮದುವೆಗೆ ನಿರಾಕರಣೆ; ಪೊಲೀಸ್ ಠಾಣೆಯೆದುರೇ ಪ್ರಿಯತಮನನ್ನು ಥಳಿಸಿದ ಯುವತಿ

ಕಲುಬರಗಿ: ಪ್ರೀತಿಸಿದ ಬಳಿಕ ಮದುವೆಯಾಗಲು ನಿರಾಕರಿಸಿದವನಿಗೆ ಯುವತಿ ಪೋಲಿಸ್ ಠಾಣೆ ಮುಂದೆಯೇ ಥಳಿಸಿದ ಘಟನೆ ಗ್ರಾಮೀಣ ಪೋಲಿಸ್ ಠಾಣೆ ಎದುರಿಗೆ ನಡೆದಿದೆ.
ಕಲಬುರಗಿ ತಾಲೂಕಿನ ಪಟ್ಟಣಾ ಗ್ರಾಮದ ನಿವಾಸಿ ಇರ್ಫಾನ್ ಮತ್ತು ಬೆಂಗಳೂರಿನ ನಿವಾಸಿ ರಹೀನಾ ಕಳೆದ ಆರು ವರ್ಷದಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಐದು ವರ್ಷಗಳ ಕಾಲ ಇಬ್ಬರೂ ಜೊತೆಯಲ್ಲಿ ಓಡಾಡಿದ್ದಾರೆ. ಆದರೀಗ ಮದುವೆ ಆಗಲ್ಲ ಅಂತ ನಡು ನೀರಲ್ಲಿ ಕೈ ಕೊಟ್ಟು ಬಂದಿದ್ದಾನೆ ಎಂದು ಬೆಂಗಳೂರಿನಿಂದ ಯುವತಿ ಕಲಬುರ್ಗಿಗೆ ಹುಡುಕಿಕೊಂಡು ಬಂದಿದ್ದಾಳೆ. ಈಗಲೂ ಮದುವೆಗೆ ಒಪ್ಪದ ಪ್ರೀಯತಮನಿಗೆ ಪ್ರೇಯಸಿ ಠಾಣೆ ಮುಂದೆಯೇ ಥಳಿಸಿದ್ದಾಳೆ.
ಕಳೆದ ವರ್ಷ ಕಲಬುರಗಿಯ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಮದುವೆ ರಿಜಿಸ್ಟಾರ್ ಮಾಡುವದಕ್ಕೆ ಅರ್ಜಿ ಕೂಡಾ ಕೊಟ್ಟಿದ್ದನಂತೆ. ಆದರೆ ಈಗ ಮದುವೆ ಆಗಲು ನಿರಾಕರಿಸಿದ್ದಾನೆ. ಮದುವೆಯಾಗುವಂತೆ ಕೇಳಿದಾಗೆಲ್ಲ ಕಥೆ ಕಟ್ಟಿದ್ದಾನೆಂದು ಯುವತಿ ಆರೋಪಿಸಿದ್ದಾಳೆ.
ಆದರೆ ರಹೀನಾಗೆ ಬೇರೆ ಯುವಕರ ಜೊತೆ ಅಕ್ರಮ ಸಂಬಂಧ ಇದೆ ಅಂತಾ ಬೆಂಗಳೂರು ಬಿಟ್ಟು ಬಂದಿದ್ದೇನೆ ಎಂದು ಯುವಕ ಹೇಳಿದ್ದಾನೆ. ಸದ್ಯ ಬೆಂಗಳೂರಿನಿಂದ ಬಂದವಳು ಮದುವೆ ಮಾಡಿಕೊಳ್ಳುವವರೆಗೆ ಬಿಡಲ್ಲ ಅಂತ ಪಟ್ಟು ಹಿಡಿದು ಕುಳಿತಿದ್ದಾಳೆ.




