
ನವದೆಹಲಿ: ಬಿಗ್ಬಾಸ್ ಓಟಿಟಿ ಮೊದಲ ಸೀಸನ್ನಿನ ವಿನ್ನರ್ ಆಗಿ ರೂಪದರ್ಶಿ, ರಿಯಾಲಿಟಿ ಟಿವಿ ಸ್ಟಾರ್ ದಿವ್ಯಾ ಅಗರ್ವಾಲ್ ಆಯ್ಕೆಯಾಗಿದ್ದಾರೆ. ಓಟಿಟಿ ಆವೃತ್ತಿಯ ಮೊದಲ ವಿಜೇತೆ ಎಂಬ ದಾಖಲೆ ಅವರದಾಗಿದೆ.

ಟ್ರೋಫಿ ಮತ್ತು 25 ಲಕ್ಷ ನಗದನ್ನು ದಿವ್ಯಾ ಗೆದ್ದಿದ್ದಾರೆ.
ಅಂತಿಮ ಸುತ್ತಿನಲ್ಲಿ ದಿವ್ಯಾ ಅವರೊಂದಿಗೆ ನಿಶಾಂತ್ ಭಟ್ ಹಾಗೂ ಶರ್ಮಿತಾ ಶೆಟ್ಟಿ ಇದ್ದರು. ಇಬ್ಬರನ್ನೂ ಹಿಂದಿಕ್ಕಿ ದಿವ್ಯಾ ಬಿಗ್ಬಾಸ್ ಆಗಿ ಹೊರಹೊಮ್ಮಿದರು. ನಿಶಾಂತ್ ಭಟ್ ಮತ್ತು ಶರ್ಮಿತಾ ಶೆಟ್ಟಿ ಕ್ರಮವಾಗಿ ಮೊದಲ ಮತ್ತು ಎರಡನೇ ರನ್ನರ್ ಅಪ್ ಆದರು.
ಬಿಗ್ಬಾಸ್ ಓಟಿಟಿ ಆವೃತ್ತಿಯ ಅಂತಿಮ ಸುತ್ತಿನಲ್ಲಿದ್ದ ಈ ಮೂವರೂ ಅಕ್ಟೋಬರ್ನಲ್ಲಿ ಆರಂಭವಾಗಲಿರುವ ಬಿಗ್ಬಾಸ್ 15ನೇ ಆವೃತ್ತಿಯ ಭಾಗವಾಗಿರಲಿದ್ದಾರೆ.
ಬಿಗ್ಬಾಸ್ ಓಟಿಟಿ ಆವೃತ್ತಿಯು ಆರು ವಾರಗಳ ಜರ್ನಿಯಾಗಿತ್ತು.



