ಹುಬ್ಬಳ್ಳಿಯ ಸೆಂಟ್ರಲ್ ಸ್ಕೂಲ್ ಬಳಿ ಚಿರತೆ ಪ್ರತ್ಯಕ್ಷ: ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ

ಧಾರವಾಡ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಸ್ಥಳಿಯರಲ್ಲಿ ಆತಂಕ ಮೂಡಿಸಿದೆ. ಕಳೆದ ಮೂರು ದಿನಗಳ ಹಿಂದೆ ನಗರದ ನೃಪತುಂಗ ಬೆಟ್ಟದಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂಬ ವದಂತಿಯ ಹಬ್ಬಿತ್ತು. ಈಗ ಅದಕ್ಕೆ ಪುಷ್ಠಿ ನೀಡುವಂತೆ ಬೆಟ್ಟದ ಕೆಳಗಿನ ಪ್ರದೇಶದಲ್ಲಿ ಶನಿವಾರ ರಾತ್ರಿ ಚಿತರೆಯು ಕಾಣಿಸಿಕೊಂಡಿದ್ದು, ಸುತ್ತಮುತ್ತಲಿನ ನಗರದ ಜನತೆಯಲ್ಲಿ ಆತಂಕ ಸೃಷ್ಟಿ ಮಾಡಿದೆ.
ನೃಪತುಂಗ ಬೆಟ್ಟದ ಕೆಳಬಾಗದ ರಾಜಮಗರ ಸೆಂಟ್ರಲ್ ಸ್ಕೂಲ್ ಆವರಣದಲ್ಲಿ ಚಿರತೆ ಕಾಣಿಸಿಕೊಂಡಿದೆ. ಶಾಲೆಯ ಆವರಣದಲ್ಲಿ ಚಿರತೆಯ ಓಡಾಟ ನೋಡಿದ ಸ್ಥಳಿಯವರು ಮೊಬೈಲ್‌ನಲ್ಲಿ ದೃಶ್ಯಗಳು ಸೆರೆ ಹಿಡಿದಿದ್ದಾರೆ. ಬಳಿಕ ಅಶೋಕ ನಗರ ಪೊಲೀಸರಿಗೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಲಕಿಗೆ ಮಾಹಿತಿ ನೀಡಿದ್ದಾರೆ. ಸ್ಥಳಿಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಪೊಲೀಸರು, ಅರಣ್ಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸ್ಥಳಿಯರ ಮೊಬೈಲ್‌ನಲ್ಲಿ ಚಿರತೆ ಓಡಾಟ ಸೆರೆ, ನಿವಾಸಿಗಳಲ್ಲಿ ಆತಂಕ:
ರಾಜ ನಗರದ ನಿವಾಸಿಗಳು ಚಿರತೆಯ ಚಲನವಲನದ ವಿಡಿಯೋ ಸೆರೆ ಹೀಡಿದಿದ್ದು, ಈಗ ರಾಜ್ಯನಗರ, ಶಿರಡಿ ನಗರ, ವಿಶ್ವೇಶ್ವರ ನಗರ, ನೃಪತುಂಗ ಬೆಟ್ಟದ ಬಳಿಯ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ. ಕಳೆದ ಮೂರು ದಿನಗಳಿಂದ ಚಿರತೆ ಪ್ರತ್ಯಕ್ಷವಾಗಿದೆ ಎಂಬ ವದತಿಯಲ್ಲಿ ಕಾಲಕಳೆಯುತ್ತಿದ್ದರು. ಆದರೆ ಈಗ ಚಿರತೆಯ ದೃಶ್ಯ ರಾಜ ನಗರದ ನಿವಾಸಿಗಳು ಸೆರೆ ಹಿಡಿದಿದ್ದರಿಂದ ನೃಪತುಂಗ ಬೆಟ್ಟದ ಅಕ್ಕಪಕ್ಕದ ನಗರಗಳ ನಿವಾಸಿಗಳಲ್ಲಿಯು ಆತಂಕ ಮತ್ತಷ್ಟು ಹೆಚ್ಚಾಗಿದೆ.




