ಜಿಲ್ಲಾ ಸುದ್ದಿಹುಬ್ಬಳ್ಳಿ - ಧಾರವಾಡ
Viral Video: ಹುಬ್ಬಳ್ಳಿ – ಧಾರವಾಡ ಬಿಆರ್‌ಟಿಎಸ್ ಬಸ್ ಟ್ರ್ಯಾಕ್‌ನಲ್ಲಿ ಚಿಗರೆ ಪ್ರತ್ಯಕ್ಷ

ಧಾರವಾಡ: ಹುಬ್ಬಳ್ಳಿ – ಧಾರವಾಡ ಬಿಆರ್‌ಟಿಎಸ್ ಟ್ರ್ಯಾಕ್‌ನಲ್ಲಿ ಚಿಗರೆಯೊಂದು ಪ್ರತ್ಯಕ್ಷವಾಗಿ ಅವಳಿ ನಗರ ವಾಹನ ಸವಾರರಲ್ಲಿ ಅಚ್ಚರಿ ಮೂಡಿಸಿದ ಘಟನೆ ನಡೆದಿದೆ.
ನಗರದ ಸಂಜೀವಿನಿ ಪಾರ್ಕ್ ಬಳಿಯ ಬಿಆರ್‌ಟಿಎಸ್ ಕಾರಿಡಾರ್ ನಲ್ಲಿ ಚಿಗರೆ ಕಾಣಿಸಿಕೊಂಡಿದೆ. ಚಿಗರೆ ನೋಡಿದ ಅವಳಿನಗರ ವಾಹನ ಸವಾರರು ಮೊಬೈಲನಲ್ಲಿ ದೃಶ್ಯಗಳು ಸೆರೆ ಹಿಡಿಯಲು ಚಿಗರಿಯ ಬೆನ್ನು ಬಿದಿದ್ದರು. ವಾಹನಗಳ ಸದ್ದು ಹಾಗೂ ಸಾರ್ವಜನಿಕರನ್ನು ನೋಡಿದ ಚಿಗರೆಯು ಭಯಗೊಂಡು ಓಡಲಾರಂಭಿಸಿದ್ದು, ಚಿಗರೆ ಓಟವನ್ನು ವಾಹನ ಸವಾರರು ಕಣ್ಣುತುಂಬಿಕೊಂಡರು.
ಚಿಗರಿ ಬಸ್ ಓಡಾಡುವ ರಸ್ತೆಯಲ್ಲಿಯೇ ಚಿಗರೆ ರನ್ನಿಂಗ್ ರೇಸ್ ಮಾಡಿದ್ದು, ಮಿಂಚಿನಂತೆ ಬಂದು ಚಿಗರೆ ಕ್ಷಣಾರ್ಧದಲ್ಲಿ ಕಣ್ಮರೆಯಾಗಿದೆ. ಎಸ್‌ಡಿಎಂ ಸತ್ತೂರು ಬಳಿಯ ಅರಣ್ಯ ಪ್ರದೇಶದಲ್ಲಿ ಕಡೆಗೆ ಚಿಗರೆಯು ಹೋಗಿದೆ ಎಂದು ಹೇಳಲಾಗುತ್ತಿದೆ. ಈಗ ಚಿಗರೆಯ ಓಟದ ವಿಡಿಯೋ ಹುಬ್ಬಳ್ಳಿ- ಧಾರವಾಡ ನಗರದ ಜನರ ಮೊಬೈಲ್‌ನಲ್ಲಿ ಸದ್ದು ಮಾಡುತ್ತಿದೆ.




