Breaking NewsLatestಮೆಟ್ರೋರಾಜಕೀಯರಾಜ್ಯ

ಆಸ್ಕರ್ ಫರ್ನಾಂಡಿಸ್ ಅಂತ್ಯಕ್ರಿಯೆ; ರಾಹುಲ್ ಮತ್ತಿತರ ಕಾಂಗ್ರೆಸ್ ನಾಯಕರು ಭಾಗಿ

ಬೆಂಗಳೂರು: ಸೋಮವಾರ ನಿಧನರಾಗಿದ್ದ ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್ ಅಂತ್ಯಕ್ರಿಯೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಾಲ್ಗೊಂಡಿದ್ದರು.

ನಗರದ ಸೇಂಟ್ ಪ್ಯಾಟ್ರಿಕ್ ಚರ್ಚ್​ನಲ್ಲಿ ಆಸ್ಕರ್ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ರಾಹುಲ್ ಗಾಂಧಿ ಆಸ್ಕರ್ ಅಂತಿಮ ದರ್ಶನ ಪಡೆದರು. ಈ ಸಂದರ್ಭದಲ್ಲಿ ಚರ್ಚ್​ಗೆ ಸಾರ್ವಜನಿಕರಿಗೆ ಪ್ರವೇಶ ಇರಲಿಲ್ಲ. ಕೆಪಿಸಿಸಿ ವತಿಯಿಂದ ನೀಡಿರುವ ಪಟ್ಟಿಯಲ್ಲಿರುವವರಿಗೆ ಮಾತ್ರ ಪ್ರವೇಶವಿತ್ತು.

ಇದಕ್ಕೂ ಮೊದಲು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮತ್ತಿತರ ನಾಯಕರು ಆಸ್ಕರ್ ಅಂತಿಮ ದರ್ಶನ ಪಡೆದು ಪುಷ್ಪ ನಮನ ಸಲ್ಲಿಸಿದರು.

ಆಸ್ಕರ್ ಕುಟುಂಬದವರನ್ನೂ ಭೇಟಿ ಮಾಡಿ ಕೆಲ ಕಾಲ ಅವರೊಂದಿಗೆ ಕಳೆದ ರಾಹುಲ್ ಗಾಂಧಿ, ಸಾಂತ್ವನ ಹೇಳಿದರು. ರಾಹುಲ್ ಗಾಂಧಿಯವರೊಡನೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಆಸ್ಕರ್ ಫರ್ನಾಂಡೀಸ್ ಅವರ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜು ಸಮೀಪದ ರೆಸ್ಟ್ ಹೌಸ್ ರಸ್ತೆಯ ನಿವಾಸಕ್ಕೆ ಭೇಟಿ ನೀಡಿ, ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಆಸ್ಕರ್ ಅವರ ಪತ್ನಿ ಬ್ಲಾಸಂ ಫರ್ನಾಂಡೀಸ್, ಪುತ್ರ ಓಶಾನ್ ಫರ್ನಾಂಡೀಸ್, ಪುತ್ರಿ ಓಶೀನ್ ಫರ್ನಾಂಡೀಸ್ ಮತ್ತಿತರ ಕುಟುಂಬ ಸದಸ್ಯರು ಇದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button