ಮನರಂಜನೆಸಿನಿಮಾಸೆಲೆಬ್ರಿಟಿ

ಲವ್ ಸ್ಟೋರಿ ಚಿತ್ರದ ಸಂದರ್ಶನಕ್ಕೆ ಹಿಂದೆಟ್ಟು ಹಾಕಿದ ನಟ ನಾಗ ಚೈತನ್ಯ

ಸಮಂತಾ ಮತ್ತು ನಾಗ ಚೈತನ್ಯ ಅತ್ಯಂತ ನೆಚ್ಚಿನ ದಂಪತಿಗಳಲ್ಲಿ ಒಬ್ಬರಾಗಿದ್ದಾರೆ. ಆದರೆ ಈ ದಂಪತಿಗಳು ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂಬ ವದಂತಿ ಕೇಳಿಬರುತ್ತಿದೆ.

ಸಾಯಿ ಪಲ್ಲವಿಯವರ ಲವ್ ಸ್ಟೋರಿ ಚಿತ್ರ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ. ನಾಗ ಚೈತನ್ಯ ಈ ಚಿತ್ರದ ಪ್ರಚಾರ ಕಾರ್ಯಕ್ಕೆ ಆಗಮಿಸುವುದಿಲ್ಲ ಎಂಬ ಸುದ್ದಿ ಚಿತ್ರರಂಗದಲ್ಲಿ ಕೇಳಿಬಂದಿತ್ತು. ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿರುವ ನಾಗಚೈತನ್ಯ ತಮ್ಮ ಚಿತ್ರದ ಬಗ್ಗೆ ಪೋಸ್ಟ್ ಮಾಡುತ್ತಿದ್ದಾರೆ. ಆದರೆ ಸಮಂತಾ ಮತ್ತು ವಿಚ್ಛೇದನದ ಬಗೆಗಿನ ಅಹಿತಕರ ಪ್ರಶ್ನೆಗಳನ್ನು ತಪ್ಪಿಸಲು ಅವರು ಮಾಧ್ಯಮದವರೊಂದಿಗೆ ಮುಖಾಮುಖಿಯಾಗುವುದಿಲ್ಲ ಎನ್ನಲಾಗಿದೆ.

ಆದರೆ ಇತ್ತೀಚಿನ ವರದಿ ಪ್ರಕಾರ ನಾಗ ಚೈತನ್ಯ ಲವ್ ಸ್ಟೋರಿ ಚಿತ್ರದ ಪ್ರಚಾರ ಚಟುವಟಿಕೆಗಳ ಭಾಗವಾಗಿ ಸಂದರ್ಶನಗಳಿಗೆ ಹಾಜರಾಗಲು ನಿರ್ಧರಿಸಿದ್ದಾರೆ. ಮತ್ತು ನಟಿ ಸಮಂತಾ ಬಗ್ಗೆ, ವೈಯಕ್ತಿಕ ಜೀವನದ ಬಗ್ಗೆ ಪ್ರಶ್ನೆಗಳಿಲ್ಲದಿದ್ದರೆ ಅವರು ಕೇವಲ ಪ್ರಚಾರಕ್ಕಾಗಿ ಮಾತ್ರ ಕಾಣಿಸಿಕೊಳ್ಳುತ್ತಾರೆ ಎಂದು ತಮ್ಮ ಪಿಆರ್ ತಂಡಕ್ಕೆ ಖಚಿತಪಡಿಸಿದ್ದಾರೆ. ಈ ಬಗ್ಗೆ ನಿರ್ಮಾಪಕರು ಭರವಸೆ ನೀಡಿದ ಬಳಿಕ ಸಂದರ್ಶನಕ್ಕೆ ಒಪ್ಪಿದ್ದಾರೆ ಎನ್ನಲಾಗಿದೆ

Spread the love

Related Articles

Leave a Reply

Your email address will not be published. Required fields are marked *

Back to top button