ದಕ್ಷಿಣ ಕನ್ನಡ
ನಿಫಾ ವೈರಸ್ ಶಂಕೆ; ಸ್ವಯಂಪ್ರೇರಿತವಾಗಿ ಪರೀಕ್ಷೆಗೆ ದಾಖಲಾದ ವ್ಯಕ್ತಿ

ಮಂಗಳೂರು: ನಿಫಾ ವೈರಸ್ ತಗುಲಿರಬಹುದೆಂಬ ಶಂಕೆಯಿಂದ ವ್ಯಕ್ತಿಯೋರ್ವ ಸ್ವಯಂಪ್ರೇರಿತವಾಗಿ ಮಂಗಳೂರಿನಲ್ಲಿ ಪರೀಕ್ಷೆಗೆ ಒಳಗಾಗಿದ್ದಾರೆ.
ಗೋವಾದಲ್ಲಿ ಆರ್ಟಿಪಿಸಿಆರ್ ಕಿಟ್ ತಯಾರಿಸುವ ಲ್ಯಾಬ್ವೊಂದರಲ್ಲಿ ಮೈಕ್ರೋ ಬಯಾಲಜಿಸ್ಟ್ ಆಗಿದ್ದ ವ್ಯಕ್ತಿ ಕಾರವಾರಕ್ಕೆ ಬಂದಿದ್ದರು. ತೀವ್ರ ಜ್ವರ ಕಾಣಿಸಿಕೊಂಡಿತ್ತು. ಮಣಿಪಾಲಕ್ಕೆ ಧಾವಿಸಿದ್ದರು. ನಂತರ ಜ್ವರ ಕಡಿಮೆಯಾಗಿದ್ದರೂ ಮಂಗಳೂರಿಗೆ ಆಸ್ಪತ್ರೆಗೆ ದಾಖಲಾಗಿ, ತನಗೆ ನಿಫಾ ವೈರಸ್ ಬಂದಿರಬಹುದೆಂದು ಶಂಕೆ ವ್ಯಕ್ತಪಡಿಸಿ, ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಐಸೋಲೇಷನ್ಗೆ ಒಳಗಾಗಿದ್ದಾರೆ.
ವ್ಯಕ್ತಿಯ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಸೆ.15ರೊಳಗೆ ವರದಿ ಬರಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ತಿಳಿಸಿದ್ದಾರೆ.




