Latestರಾಜಕೀಯರಾಷ್ಟ್ರೀಯ

ರೈತರ ಪ್ರತಿಭಟನೆಯಿಂದ ಅಭಿವೃದ್ಧಿ ಕುಂಠಿತ; ಹೀಗೆಂದಿದ್ದು ಸಿಧು ಅಲ್ಲ, ಅಮರಿಂದರ್ ಸಿಂಗ್!

ಚಂಡೀಘಡ: ಒಂದೆಡೆ ನವಜೋತ್ ಸಿಂಗ್ ಸಿಧು ಕಡೆಯಿಂದ ಗುದ್ದಿಸಿಕೊಳ್ಳುತ್ತಿರುವ ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಅದೇಕೋ ರಯತರ ಮೇಲೆ ಸಿಟ್ಟಾಗಿದ್ದಾರೆ. ರೈತರ ಪ್ರತಿಭಟನೆಯಿಂದಾಗಿ ರಅಜ್ಯದ ಅಭಿವೃದ್ಧಿ ಕುಂಠಿತವಾಗಿದೆ ಎಂದು ತಕರಾರೆತ್ತಿರುವ ಅವರು, ಪ್ರತಿಭಟನೆಯನ್ನು ದೆಹಲಿಗೆ ವರ್ಗಾಯಿಸಿ ಎಂದಿದ್ದಾರೆ.

ಪಂಜಾಬಿನಲ್ಲಿ ಕಳೆದ ವರ್ಷದಿಂದ ನಿರಂತರವಾಗಿ ನಡೆಯುತ್ತಿರುವ ರೈತ ಹೋರಾಟ ರಾಜ್ಯದ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತಿದೆ ಎಂಬುದು ಅವರ ವಾದ.

ಪಂಜಾಬ್​ನ 110ಕ್ಕೂ ಹೆಚ್ಚು ಸ್ಥಳಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ರಾಜ್ಯದ ಅಭಿವೃದ್ಧಿಯ ಮೇಲೆ ಪರಿಣಾಮ ಬೀರುತ್ತಿದೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವುದಿದ್ದರೆ, ಕೇಂದ್ರಸ್ಥಾನ ನವದೆಹಲಿಯಲ್ಲಿ ಹೋರಾಟ ಮುಂದುವರಿಸಬೇಕು. ಆದರೆ ರಾಜ್ಯದಲ್ಲಿ ಪ್ರತಿಭಟನೆ ನಡೆಸುತ್ತಾ ತೊಂದರೆ ನೀಡಬೇಡಿ ಎಂದು ರೈತ ಹೋರಾಟಗಾರರಿಗೆ ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಸಲಹೆ ನೀಡಿದ್ದಾರೆ.

ಹೀಗೆ ಹೇಳುವ ಅವರಿಗೆ, ಕೇಂದ್ರದ ಮೂರು ಕೃಷಿ ಕಾಯ್ದೆಗಳು ರೈತರಿಗೆ ಮಾರಕವಅಗಿವೆ ಎಂಬುದರ ಕಡೆ ಗಮನವಿಲ್ಲವೇ ಎಂಬ ಪ್ರಶ್ನೆಯೆದ್ದಿದೆ. ನಾಡಿನ ಪ್ರಾನವೇ ಆಗಿರುವ ರೈತರು ತಮಗೆ ಅನ್ಯಾಯವಾದರೆ ಪ್ರತಿಭಟಿಸುವುದರಿಂದ ಅಮರೀಂದರ್​ ಸಿಂಗ್ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗುತ್ತದಂತೆ.

ಸಿಧು ಕಡೆಯಿಂದ ಗುದ್ದಿಸಿಕೊಳ್ಳುತ್ತ ಅಸಹಾಯಕರಂತಾಗಿರುವ ಅಮರೀಂದರ್ ಸಿಂಗ್​ಗೆ ತಮ್ಮಬ್ಬರ ನಡುವಿನ ರಾಜಕೀಯ ಸಂಘರ್ಷ ಮತ್ತು ಅದು ರಾಜ್ಯದಲ್ಲಿ ಎಬ್ಬಿಸಿರುವ ಅಸಹ್ಯವು ರಾಜ್ಯದ ಅಭಿವೃದ್ಧಿಗೆ ಕುಂಠಿತವಾಯಿತೆಂದು ಅನ್ನಿಸದೇ ಇರುವುದು ವಿಪರ್ಯಾಸ.

ಅಮರೀಂದರ್ ಅಂಥ ನಾಯಕನೊಬ್ಬನ ಕಡೆಯಿಂದ ರೈತರ ಬಗೆಗಿನ ಇಂಥ ನಿಲುವು ನಿರೀಕ್ಷಿಸಿದ್ದಾಗಿರಲಿಲ್ಲ. ಸಿಧು ಹೀಗೇನಾದರೂ ಹೇಳಿದ್ದಿದ್ದರೆ ಅದರ ಬಗ್ಗೆ ಪ್ರತಿಕ್ರಿಯಿಸಬೇಕಾಗಿಯೇ ಇರಲಿಲ್ಲ.

Spread the love

Related Articles

Leave a Reply

Your email address will not be published. Required fields are marked *

Back to top button