Breaking NewsLatestಜಿಲ್ಲಾ ಸುದ್ದಿಯಾದಗಿರಿ

ಯಾದಗಿರಿ ಮಹಿಳೆ ನಗ್ನಗೊಳಿಸಿ ಹಲ್ಲೆ : ನಾಲ್ವರು ಆರೋಪಿಗಳ ಬಂಧನ

ಯಾದಗಿರಿ: ಬಿಹಾರ್ ಮಾದರಿಯಲ್ಲಿ ರಾಜ್ಯದ ಯಾದಗಿರಿಯಲ್ಲಿ ಹೇಯ ಕೃತ್ಯವೊಂದು ನಡೆದಿದೆ. ಮಹಿಳೆಯನ್ನು ನಗ್ನಗೊಳಿಸಿ ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಆರೋಪಿಗಳಾದ ನಿಂಗರಾಜ್(24), ಅಯ್ಯಪ್ಪ (23), ಭೀಮಾಶಂಕರ್ (28), ಶರಣು (22) ಅವರುಗಳನ್ನು ಬಂಧಿಸಿದ್ದಾರೆ.

ಮಹಿಳೆಯನ್ನು ನಗ್ನ ಗೊಳಿಸಿ ಮನ ಬಂದಂತೆ ಥಳಿಸಿ ವಿಕೃತಿ ಮೆರೆದ ದುರುಳರು, ಆಕೆಯ ಅಂಗಾಗ ಮುಟ್ಟಿ ಕಾಮತೃಷೆ ತಿರಿಸಿಕೊಂಡಿದ್ದಾರೆ. ರಾತ್ರಿ ಕಗ್ಗತ್ತಲಿನಲ್ಲಿ ಮಹಿಳೆಯ ಬಟ್ಟೆ ಬಿಚ್ಚಿ ಥಳಿಸಿದ್ದಾರೆ. ಕಾಲು ಬಿಳ್ತಿನಿ ಬಿಟ್ಟು ಬಿಡಿ ಎಂದು ಬೇಡಿಕೊಂಡ್ರು ಬಿಡದೆ ಮಹಿಳೆಯ ಮೇಲೆ ಪೈಶಾಚಿ ಕೃತ್ಯ ಎಸಗಿದ್ದಾರೆ. ಮಹಿಳೆಗೆ ಕಿರುಕುಳ ನೀಡುವ ದೃಶ್ಯ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಲ್ಲದೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ವಿಕೃತಿ ಮೇರೆದಿದ್ದಾರೆ.‌ ಯಾದಗಿರಿ ತಾಲೂಕಿನ ಚಟ್ನಳ್ಳಿ ಹಾಗೂ ಹಳಿಸಗರ ಮಧ್ಯೆ ಈ ಘಟನೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ವಿಡಿಯೋ ದೃಶ್ಯ ಆಧಾರದ ಮೇಲೆ ಮಹಿಳೆಯನ್ನು ಪತ್ತೆ ಮಾಡಿ, ಆಕೆಯ ಹೇಳಿಕೆಯ ಸಾರಾಂಶದ ಮೇಲೆ ಶಹಪೂರ ಠಾಣಾ ಗುನ್ನೆ ನಂ 212/2021 ಕಲಂ 354(b), 366, 394,376(d), 504,506 r/w 34 ಐ.ಪಿ.ಸಿ ಮತ್ತು 3(1)(w), 3(2)(v) SC/ST PA act ಪ್ರಕಾರ ಪ್ರಕರಣ ದಾಖಲಿಸಲಾಗಿದೆ.

ಈ ಘಟನೆ ಒಂದುವರೆ ವರ್ಷದ ಹಿಂದೆ ನಡೆದಿದೆ ಎಂದು ತಿಳಿದು ಬಂದಿದೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು‌ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button