Breaking Newsಕಲಬುರ್ಗಿಜಿಲ್ಲಾ ಸುದ್ದಿರಾಜಕೀಯ

ಬಿಜೆಪಿಯವರು ತಿರುಕನ ಕನಸು ಕಾಣುತ್ತಿದ್ದಾರೆ: ಮಾಜಿ ಸಚಿವ ಶರಣಪ್ರಕಾಶ ಪಾಟೀಲ್

ಕಲಬುರಗಿ: ಬಿಜೆಪಿಯವರು ತಿರುಕನ ಕನಸು ಕಾಣುತ್ತಿದೆ. ವಾಮ ಮಾರ್ಗದಿಂದ ಅಧಿಕಾರಕ್ಕೆ ಬರಲು ಸಂಚು ನಡೆಸುತ್ತಿದೆ ಎಂದು ಮಾಜಿ ಸಚಿವ ಶರಣಪ್ರಕಾಶ ಪಾಟೀಲ್ ಆರೋಪಿಸಿದ್ದಾರೆ.

ನಗರದ ಡಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಸದಸ್ಯರನ್ನು ಖರೀದಿಗೆ ಬಿಜೆಪಿಯವರು ಹುನ್ನಾರ ನಡೆಸಿದ್ದಾರೆ. ಆದ್ರೆ ಅದ್ಯಾವುದು ಸಾಧ್ಯವಿಲ್ಲ. ಜೆಡಿಎಸ್ ನವರು ಕಾಂಗ್ರೆಸ್ ಜೊತೆ ಮೈತ್ರಿಗಾಗಿ ಒಲವು ತೋರಿಸುತ್ತಿದ್ದಾರೆ. ಸ್ಥಳೀಯ ಜೆಡಿಎಸ್ ಮುಖಂಡರಿಗೂ ಕಾಂಗ್ರೆಸ್ ಜೊತೆ ಮೈತ್ರಿಗೆ ಹೆಚ್ಚಿನ ಒಲವಿದೆ. ಮಲ್ಲಿಕಾರ್ಜುನ ಖರ್ಗೆ ಅವರು ದೇವೆಗೌಡರ ಜೊತೆಗೆ ಮಾತುಕತೆ ನಡೆಸುತ್ತಿದ್ದಾರೆ. ಡಿಕೆಶಿ, ಪ್ರೀಯಾಂಕ ಖರ್ಗೆ ಅವರು ಕೂಡ ಕುಮಾರಸ್ವಾಮಿ ಜೊತೆ ಮಾತಾಡ್ತಿದ್ದಾರೆ. ಸದ್ಯ ಮೇಯರ್ ಪಟ್ಟದ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಆಗಿಲ್ಲ. ಆದರೆ ಕಲಬುರಗಿ ಪಾಲಿಕೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಆಡಳಿತ ನಡೆಯುದು ಪಕ್ಕಾ. ಬಿಜೆಪಿಯವರಿಗೆ ಸಿದ್ದಾಂತ ಇಲ್ಲ, ಹಣ ಬಲದಿಂದ ಅಧಿಕಾರ ಹಿಡಿಯಲು ವಾಮ ಮಾರ್ಗ ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿ.ಪಂ ತಾ.ಪಂ ಚುನಾವಣೆ ಮುಂದುಡಿಕೆಗೆ ಸರ್ಕಾರ ಕುತಂತ್ರ

ಬಿಜೆಪಿ ಎಲ್ಲಾ ಸಂಸ್ಥೆಗಳನ್ನು ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಸಿಎಂ ಅವರಿಗೆ ಮಾನ ಮಾರ್ಯದೆ, ಬದ್ದತೆ ಇದ್ರೆ ಮೇಯರ್ ಚುನಾವಣೆ ಘೋಷಣೆ ಮಾಡಬೇಕು. ಜಿಲ್ಲಾ ಪಂಚಾಯತ, ತಾಲ್ಲೂಕು ಪಂಚಾಯತ್ ಚುನಾವಣೆ ಮುಂದುಡಲು ಬೊಮ್ಮಾಯಿ ಸರ್ಕಾರ ಕುತಂತ್ರ ಮಾಡ್ತಿದೆ ಎಂದು ಆರೋಪಿಸಿದ ಪಾಟೀಲ್, ಚುನಾವಣೆಯನ್ನ ಶೀಘ್ರವೇ ಘೋಷಣೆ ಮಾಡುವಂತೆ ಒತ್ತಾಯಿಸಿದರು.

ಕಟೀಲ್ ಗೆ ಬುದ್ದಿ ಭ್ರಮಣೆ ಆದಂತಿದೆ:

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೆ ಬುದ್ದಿ ಭ್ರಮಣೆ ಆಗಿದೆ ಏನೋ ಗೊತ್ತಿಲ್ಲ. ಕಲಬುರಗಿಗೆ ಬಂದು ಬಾಯಿಗೆ ಬಂದ ಹಾಗೆ ಮಾತಾಡಿದ್ದಾರೆ. ಕಟೀಲ್ ಗೆ ಗಣಿತ ಲೆಕ್ಕ ಗೊತ್ತಿಲ್ಲ ಅಂತಾ ಕಾಣಿಸುತ್ತೆ. ಬಿಜೆಪಿಗೆ ಬಹುಮತ‌ ಇದೆ ಅಂತಾ ಹೇಳಿಕೊಳ್ಳುತ್ತಿದ್ದಾರೆ. ಯಕ್ಷಗಾನದಲ್ಲಿ ನಟನೆ ಮಾಡಿದ ಹಾಗೆ ಮಾತಾಡಿದ್ದಾರೆ. ಕಾಂಗ್ರೆಸ್ 55 ರಲ್ಲಿ 27 ಸೀಟ್ ಗಳನ್ನ ಗೆದ್ದಿದ್ದೇವೆ. ಬಿಜೆಪಿ‌ 23 ಸೀಟ್ ಗೆದ್ದಿದೆ, ಬಿಜೆಪಿಗೆ ಯಾವ ಬಹುಮತ ಇಲ್ಲ. ಕಾಂಗ್ರೆಸ್ ಗೆ ಶೇ. 38 ರಷ್ಟು ಮತಗಳು ಬಂದಿದೆ ಬಿಜೆಪಿಗೆ ಶೇ. 31 ರಷ್ಟು ಪ್ರತಿಶತ ಬಂದಿದೆ. ಹೀಗಿರುವಾಗ ಬಿಜೆಪಿ ಗೆ ಬಹುಮತ ಇದೆ ಅಂತಾ ಕಟೀಲ್ ಹೇಳಿದ್ದಾರೆ. ಕಟೀಲ್ ಗೆ ಬುದ್ದಿ ಭ್ರಮಣೆ ಆದಂತಿದೆ ಎಂದು ಟಿಕಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button