ರಾಷ್ಟ್ರೀಯ

ಪಾಕಿಸ್ತಾನದ ಐಎಸ್ಐ ಏಜೆಂಟ್ ಸಂಪರ್ಕ ಆರೋಪ; ರೈಲ್ವೆ ಅಂಚೆ ಸಿಬ್ಬಂದಿ ಬಂಧನ

ನವದೆಹಲಿ: ರೈಲ್ವೆ ಅಂಚೆ ಸೇವೆಯಲ್ಲಿ ಮಲ್ಟಿ ಟಾಸ್ಕಿಂಗ್ ಸ್ಟಾಫ್ ಕೆಲಸ ಮಾಡುತ್ತಲೇ ದೇಶದ ಸೇನಾ ಸಂಬಂಧಿತ ಪತ್ರಗಳ ಫೋಟೋಗಳನ್ನು ತೆಗೆದು ಪಾಕಿಸ್ತಾನದ ಐಎಸ್ಐ ಏಜೆಂಟರಿಗೆ ಕಳುಹಿಸುತ್ತ ದೇಶವಿರೋಧಿ ಬೇಹುಗಾರಿಕೆ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಆರೋಪಿಯೋರ್ವನನ್ನು ಸೇನಾ ಗುಪ್ತಚರ ವಿಭಾಗ ಹಾಗೂ ರಾಜಸ್ಥಾನದ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಭರತ್ ಗೊದರ ಎಂದು ಗುರುತಿಸಲಾಗಿದೆ. ರೈಲ್ವೆ ಅಂಚೆಯಲ್ಲಿ ರಾತ್ರಿಪಾಳಿ ಕೆಲಸ ಮಾಡುತ್ತಿದ್ದ ಭರತ್ ಸೇನಾ ಅಂಚೆಗೆ ರವಾನೆಯಾಗುತ್ತಿದ್ದ ಎಲ್ಲಾ ಪತ್ರಗಳನ್ನೂ ತೆರೆದು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದ. ಈತನ ಮೇಲೆ ಅನುಮಾನ ಉಂಟಾಗಿದ್ದರಿಂದ ಗುಪ್ತಚರ ಏಜೆನ್ಸಿ ಕೆಲ ಕಾಲದಿಂದ ನಿಗಾ ಇಟ್ಟಿತ್ತು.

ಆರೋಪಿ ಮೊಬೈಲ್ ನ ಮೇಸೆಂಜರ್ ವೊಂದರಲ್ಲಿ ಮಹಿಳೆಯೋರ್ವಳ ಸಂಪರ್ಕ ಹೊಂದಿದ್ದ. ಆಕೆ ಅಂಡಮಾನ್-ನಿಕೋಬಾರ್ ದ್ವೀಪದ ಪೋರ್ಟಬ್ಲೇರ್ ನಲ್ಲಿ ನರ್ಸಿಂಗ್ ಸಹಾಯಕಿ ಎಂದು ಹೇಳಿಕೊಂಡಿದ್ದು, ಪಾಕ್ ಐಎಸ್ಐ ಏಜೆಂಟ್ ಎಂಬುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ಆರೋಪಿ ಮತ್ತು ಮಹಿಳೆ ಇಬ್ಬರೂ ತುಂಬಾ ಆತ್ಮೀಯತೆ ಹೊಂದಿದ್ದರು. ಪರಸ್ಪರ ವಿಡಿಯೋ ಕರೆಗಳನ್ನು ಮಾಡುತ್ತಿದ್ದರು. ಆಕೆ ಭಾರತೀಯ ಸಂಖ್ಯೆಯೊಂದರಿಂದ ವಾಟ್ಸಾಪ್ ಕ್ರಿಯೇಟ್ ಮಾಡಿಕೊಟ್ಟಿದ್ದ. ಆ ಮೂಲಕ ಆತನ ಫೋನ್ನಿಂದ ರಕ್ಷಣಾ ಸಂಬಂಧಿ ಪತ್ರಗಳು ಹಾಗೂ ಫೋಟೋಗಳು ರವಾನೆಯಾಗಿರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button