ಜಿಲ್ಲಾ ಸುದ್ದಿಮಂಡ್ಯ
ಕಾಡಾನೆ ದಾಳಿಗೆ ಟೊಮೇಟೊ, ಅಡಿಕೆ ಬಾಳೆ ನಾಶ

ಮಂಡ್ಯ : ಟೊಮೇಟೊ, ಪರಂಗಿ, ಅಡಿಕೆ ಅಲ್ಲದೆ ಜಮೀನಿನಲ್ಲಿ ಹಾಕಿದ್ದ ಪೈಪುಗಳನ್ನು ಶಿಂಶಾ ಕಾಡಿನಿಂದ ಬಂದ ಒಂಟಿ ಸಲಗವೊಂದು ತುಳಿದು ನಾಶಪಡಿಸಿರುವ ಘಟನೆ ಮಳವಳ್ಳಿ ತಾಲ್ಲೂಕಿನ ಚಂದಹಳ್ಳಿ ಗ್ರಾಮದಲ್ಲಿ ತಡರಾತ್ರಿ ಜರುಗಿದೆ.
ಚಂದಹಳ್ಳಿ ಗ್ರಾಮದ ಚನ್ನೇಗೌಡ ಹಾಗೂ ರಾಜುಪೂಜಾರಿ ಎಂಬುವರಿಗೆ ಸೇರಿದ ಬೆಳೆಗಳಾಗಿದ್ದು, ಸತತ 3 ದಿನಗಳಿಂದ ನಮ್ಮ ಜಮೀನಿನಲ್ಲಿ ಟೊಮೇಟೊ ಬೇಸಾಯ ಮಾಡುತ್ತಿದ್ದು, ಜಮೀನಿಗೆ ಒಂಟಿ ಸಲಗವೊಂದು ದಾಳಿ ಮಾಡಿ ಕಟಾವಿಗೆ ಬಂದಿದ್ದ ಟೊಮೇಟೊ ಹಾಗೂ ಬಾಳೆಯನ್ನು ತಿಂದು ತುಳಿದು ನಾಶಪಡಿಸಿವೆ.
ಸುಮಾರು 1 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ. ಅರಣ್ಯ ಇಲಾಖೆಯವರು ನಮ್ಮ ಗ್ರಾಮಗಳ ಹತ್ತಿರ ಬಂದು ರಾತ್ರಿಯ ವೇಳೆ ಗಸ್ತು ಮಾಡಬೇಕು. ಕಾಡಾನೆಯನ್ನು ಕಾಡಿಗಟ್ಟಿ ಅತಿ ಶೀಘ್ರದಲ್ಲೇ ಪರಿಹಾರ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.




