ಕಂಗನಾಗೊಸ್ಕರ ಮತ್ತೆ ರಾಮನ ಪಾತ್ರ ಮಾಡ್ತಾರಾ ನಟ ಪ್ರಭಾಸ್

ಬಾಲಿವುಡ್ ನಟಿ ಕಂಗನಾ ರನೌತ್ ಅವರು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಜೀವನಚರಿತ್ರೆ ‘ತಲೈವಿ ‘ ಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು, ಇದು ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇತ್ತೀಚಿನ ವರದಿ ಪ್ರಕಾರ ಕಂಗನಾ ಅವರು ತಮ್ಮ ಮುಂಬರುವ ಯೋಜನೆಯಲ್ಲಿ ಸೀತಾದೇವಿಯ ಪಾತ್ರವನ್ನು ನಿರ್ವಹಿಸಲಿದ್ದಾರೆ ಎನ್ನಲಾಗಿದೆ.
ವಿಜಯೇಂದ್ರ ಪ್ರಸಾದ್ ಅವರು ಕಂಗನಾ ರನೌತ್ ಗೆ ಈಗಾಗಲೇ ಕಥೆಯನ್ನು ನೀಡಿದ್ದಾರೆ. ಅದಕ್ಕೆ ಸೀತಾ ಎಂದು ಸಹ ಹೆಸರಿಡಲಾಗಿದೆ. ಈ ಚಿತ್ರವು ರಾಮಾಯಣದ ಪಾತ್ರದ ಸುತ್ತ ಸುತ್ತುತ್ತದೆ. ತನ್ನ ಪ್ರಸ್ತುತ ಚಿತ್ರದ ಬಳಿಕ ನಟಿ ಕಂಗನಾ ಪೌರಾಣಿಕ ಚಿತ್ರದ ಸೆಟ್ ಗಳಿಗೆ ಸೇರಲಿದ್ದಾರೆ ಎನ್ನಲಾಗುತ್ತಿದೆ.
ಈ ಚಿತ್ರದಲ್ಲಿ ರಾಮನ ಪಾತ್ರಕ್ಕೆ ನಟನ ಆಯ್ಕೆ ಆಗಿಲ್ಲ. ಆದರೆ ಇತ್ತೀಚಿನ ಸಂದರ್ಶನವೊಂದರಲ್ಲಿ ಪ್ರಭಾಸ್ ಜೊತೆ ಸ್ಕ್ರೀನ್ ಹಂಚಿಕೊಳ್ಳಲು ಬಯಸುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ ಈಗಾಗಲೇ ಪ್ರಭಾಸ್ ಓಂರಾವುತ್ ಅವರ ಆದಿಪುರುಷ ಚಿತ್ರದಲ್ಲಿ ರಾಮನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈಗ ಪ್ರಭಾಸ್ ಈ ಚಿತ್ರದಲ್ಲಿ ಕಂಗನಾಗೋಸ್ಕರ್ ರಾಮನ ಪಾತ್ರ ಮಾಡುತ್ತಾರೆಯೇ ಎಂಬುದನ್ನು ಕಾದು ನೋಡಬೇಕು




