Latestಇತರ ಕ್ರೀಡೆಕ್ರೀಡೆ

ಯುಎಸ್ ಓಪನ್ ಫೈನಲ್; ಜೊಕೊವಿಕ್ ಎದುರಾಳಿ ಮೆಡ್ವಿಡೇವ್

ನ್ಯೂಯಾರ್ಕ್: 21ನೇ ಗ್ರ್ಯಾನ್ ಸ್ಲಾಮ್ ಗುರಿ ಹೊಂದಿರುವ ಸರ್ಬಿಯಾದ ನೊವಾಕ್ ಜೊಕೊವಿಕ್ ಯುಎಸ್ ಓಪನ್ ಟೆನಿಸ್ ಚಾಂಪಿಯನ್ಷಿಪ್ ಫೈನಲ್ ನಲ್ಲಿ ರಷ್ಯಾದ ಡೆನಿಲ್ ಮೆಡ್ವಿಡೇವ್ ವಿರುದ್ಧ ಸೆಣಸಲಿದ್ದಾರೆ.

ಭಾನುವಾರ ನಡೆಯಲಿರುವ ಫೈನಲ್ ನಲ್ಲಿ ಜೊಕೊವಿಕ್ ಜಯ ಗಳಿಸಿದರೆ ಅತಿಹೆಚ್ಚು ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗೆದ್ದ ಮೊದಲ ಆಟಗಾರ ಎನಿಸಲಿದ್ದಾರೆ.
ಅಲ್ಲದೆ ಒಂದೇ ವರ್ಷದಲ್ಲಿ ನಾಲ್ಕೂ ಗ್ರ್ಯಾನ್ ಸ್ಲಾಮ್ ಗೆದ್ದು ರಾಡ್ ಲೇವರ್ ಅವರ ಸಾಧನೆಯನ್ನು ಸರಿಗಟ್ಟಲಿದ್ದಾರೆ.

20 ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯನ್ನು ಇದುವರೆಗೂ ರಫೆಲ್ ನಡಾಲ್ ಹಾಗೂ ರೋಜರ್ ಫೆಡರರ್ ಗೆದ್ದಿರುತ್ತಾರೆ.

ಅಲೆಕ್ಸಾಂಡರ್ ಜ್ವೆರೋವ್ ವಿರುದ್ಧ ನಡೆದ ಸೆಮಿಫೈನಲ್‌ ಹೋರಾಟದಲ್ಲಿ 4-6, 6-2, 6-4, 4-6, 6-2 ಅಂತರದಲ್ಲಿ ಜಯ ಗಳಿಸಿ ಐತಿಹಾಸಿಕ ಫೈನಲ್ ಪ್ರವೇಶಿಸಿದರು.‌31 ಫೈನಲ್ ಪ್ರವೇಶಿಸುವ ಮೂಲಕ ಜೊಕೊವಿಕ್ ಸ್ವಿಜರ್ಲೆಂಡ್ ನ ರೋಜರ್ ಫೆಡರರ್ ಅವರ ದಾಖಲೆಯನ್ನು ಸರಿಗಟ್ಟಿದರು. ಫೆಡರರ್ 31 ಬಾರಿ ಗ್ರ್ಯಾನ್ ಸ್ಲಾಮ್ ಫೈನಲ್ ಪ್ರವೇಶಿಸಿದ್ದರು.

ಈ ಋತುವಿನಲ್ಲಿ ಜೊಕೊವಿಕ್ 27 ಗ್ರ್ಯಾನ್ ಸ್ಲಾಮ್ ಪಂದ್ಯಗಳನ್ನಾಡಿದ್ದು ಎಲ್ಲಿಯೂ ಸೋಲು ಅನುಭವಿಸಿರಲಿಲ್ಲ. ಜೊಕೊವಿಕ್ ಎಟಿಪಿ ರಾಂಕಿಂಗ್ ನಲ್ಲಿ ಅತಿ ಹೆಚ್ಚು ವಾರಗಳ ಕಾಲ ಉಳಿದ ಮೊದಲ ಆಟಗಾರರೆನಿಸಿದ್ದಾರೆ.

ದಿನದ ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಮೆಡ್ವೆಡೆವ್ ಕೆನಡಾದ ಫೆಲಿಕ್ಸ್ ಆಗರ್ ಅಲೆಸ್ಸಿಮೆ ವಿರುದ್ಧ 6-4, 7-5, 6-2 ಅಂತರದಲ್ಲಿ ಜಯ ಗಳಿಸಿ ಫೈನಲ್ ಪ್ರವೇಶಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button