Breaking NewsLatestರಾಷ್ಟ್ರೀಯವಾಣಿಜ್ಯ
ನ್ಯೂಸ್ ಕ್ಲಿಕ್, ನ್ಯೂಸ್ ಲಾಂಡ್ರಿ ಪೋರ್ಟಲ್ ಕಚೇರಿಗಳಲ್ಲಿ ಐಟಿ ‘ಸರ್ವೆ’

ನವದೆಹಲಿ: ಸುದ್ದಿ ಪೋರ್ಟಲ್ಗಳಾದ ನ್ಯೂಸ್ ಕ್ಲಿಕ್ ಮತ್ತು ನ್ಯೂಸ್ ಲಾಂಡ್ರಿ ಕಚೇರಿಗಳಿಗೆ ಶುಕ್ರವಾರ ಆದಾಯ ತೆರಿಗೆ ಅಧಿಕಾರಿಗಳು ಭೇಟಿ ನೀಡಿದ್ದರು. ಆದರೆ ಇದನ್ನು ರೇಡ್ ಎನ್ನದೆ, ಸರ್ವೇ ಎಂದು ಕರೆಯಲಾಗಿದೆ.
ದಕ್ಷಿಣ ದೆಹಲಿಯಲ್ಲಿರುವ ಈ ಸುದ್ದಿ ಪೋರ್ಟಲ್ಗಳ ಕಚೇರಿಗೆ ಸರ್ವೇಗಾಗಿ ತನ್ನ ಅಧಿಖಾರಿಗಳು ಹೋಗಿದ್ದರೆಂಬುದನ್ನು ಆದಾಯ ತೆರಿಗೆ ಇಲಾಖೆ ಖಚಿತಪಡಿಸಿರುವುದಾಗಿ ವರದಿಯಾಗಿದೆ.
ತೆರಿಗೆ ವಂಚನೆ ಆರೋಪಕ್ಕೆ ಸಂಬಂಧಿಸಿ ಇ ಸರ್ವೆ ಎಂದಿರುವ ಅಧಿಕಾರಿಗಳು, ಲೆಕ್ಕದ ಪುಸ್ತಕಗಳ ಪರಿಶೀಲನೆ ನಡೆಸಿದರೆನ್ನಲಾಗಿದೆ. ಸಂಸ್ಥೆಗಳ ತೆರಿಗೆ ಪಾವತಿ ವಿವರವನ್ನು ಪರಿಶೀಲಿಸಲಾಯಿತೆಂದು ತಿಳಿದುಬಂದಿದೆ.
ಕಳೆದ ಫೆಬ್ರವರಿಯಲ್ಲಿ ನ್ಯೂಸ್ ಲಾಂಡ್ರಿ ಮತ್ತದರ ಸಂಸ್ಥಾಪಕರ ವಿರುದ್ಧ ಜಾರಿ ನಿರ್ದೇಶನಾಲಯ ದಾಳಿ ನಡೆದಿತ್ತು. 2018-19ರ ಆರ್ಥಿಕ ವರ್ಷದಲ್ಲಿ 9.59 ಕೋಟಿ ರೂ. ವಿದೇಶಿ ನೇರ ಹೂಡಿಕೆಯನ್ನು ಸಂಸ್ಥೆ ಪಡೆದಿತ್ತೆಂದು ದೆಹಲಿ ಪೊಲೀಸರು ಎಫ್ಐಆರ್ ದೆಆಖಲಿಸಿದ ಬಳಿಕ ಆ ದಾಳಿ ನಡೆದಿತ್ತು.
