ರಾಜ್ಯ

ಲಾಕ್​ಡೌನ್ ಮುಂದುವರಿಕೆ ವಿಚಾರ; ಶನಿವಾರ ಸರ್ಕಾರದ ನಿರ್ಧಾರ

ರಾಜ್ಯದಲ್ಲಿ ಲಾಕ್​ಡೌನ್​ ವಸ್ತರಣೆ ಆಗುತ್ತದೊ ಇಲ್ಲವೊ ಎನ್ನುವುದನ್ನು ಸರ್ಕಾರ ಶನಿವಾರ ಪ್ರಕಟಿಸಲಿದೆ. ಇನ್ನೂ 2 ವಾರಗಳವರೆಗೆ ಮುಂದುವರಿಸುವ ಸಾಧ್ಯತೆ ಪರಿಣತರ ಸಲಹೆಯ ಹಿನ್ನೆಲೆಯಲ್ಲಿ ಇತ್ತು. ಸಚಿವರು ಮತ್ತು ಪರಿಣತರೊಂದಿಗಿನ ಸಭೆಯ ಬಳಿಕ ಸಿಎಂ ಯಡಿಯೂರಪ್ಪ ಈ ವಿಚಾರ ಪ್ರಕಟಿಸುವ ನಿರೀಕ್ಷೆಯೂ ಇತ್ತು.

ಆದರೆ ಈ ಬಗ್ಗೆ ಶನಿವಾರವೇ ಗೊತ್ತಾಘಲಿದೆ. ಅಲ್ಲಿಯವರೆಗೆ ತನ್ನ ನಿರ್ಧಾರವನ್ನು ಸರ್ಕಾರ ಗುಟ್ಟಾಗಿಡಲಿದೆ.

ಆದರೆ, ರಫ್ತು ವಲಯದ ಕೈಗಾರಿಕೆಗಳಿಗೆ ಶೇ.50ರಷ್ಟು ಸಿಬ್ಬಂದಿಯನ್ನು ಇಟ್ಟುಕೊಂಡು ಕಾರ್ಯಾರಂಭ ಮಾಡಲು ಸರ್ಕಾರ ಅನುಮತಿ ನೀಡಿದೆ. ಈ ರಿಯಾಯ್ತಿ ನಾಳೆಯಿಂದಲೇ ಅನ್ವಯವಾಗುವಂತೆ ಸರ್ಕಾರ ಆದೇಶ ಹೊರಡಿಸಿದೆ.

ಶನಿವಾರ ಮತ್ತೊಮ್ಮೆ ಸಚಿವರೊಂದಿಗೆ ಸಭೆ ನಡೆಸಲಿರುವ ಸಿಎಂ, ಆ ಬಳಿಕವೇ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ.

Spread the love

Related Articles

Leave a Reply

Your email address will not be published. Required fields are marked *

Back to top button