ಕಲಬುರ್ಗಿ

ಕಲಬುರಗಿಯಲ್ಲಿ ಜನರ ಆಶಿರ್ವಾದ ಸಿಕ್ಕಿದೆ, ಅಧಿಕಾರ ಹಿಡಿಯುತ್ತೇವೆ: ನಳಿನಕುಮಾರ ಕಟೀಲ್

ಕಲಬುರಗಿ: ಕಲಬುರಗಿಯಲ್ಲಿ ಮೊದಲ ಬಾರಿಗೆ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ನಾವು ಪೂರ್ಣ ರೀತಿಯ ಅಧಿಕಾರ ಹಿಡಿಯಲು ಪ್ರಯತ್ನ ನಡೆಸುತ್ತಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಅವರು, ಕಲಬುರಗಿ ಪಾಲಿಕೆಯಲ್ಲಿ ಅಧಿಕಾರ ರಚನೆಗೆ ಎಲ್ಲಾ ರೀತಿಯ ತಂತ್ರಗಾರಿಕೆ ಬಳಸಿ ಪೂರ್ಣ ರೀತಿಯ ಅಧಿಕಾರ ಹಿಡಿಯಲು ಪ್ರಯತ್ನ ನಡೆಸುತ್ತೇವೆ. ಬಿಜೆಪಿ ದೊಡ್ಡ ಪಾರ್ಟಿಯಾಗಿ ಹೊರಹೊಮ್ಮಿದೆ. ಕಲಬುರಗಿ ಕಾರ್ಯಕರ್ತರು ಭಾರತಿಯ ಜನತಾ ಪಾರ್ಟಿಯನ್ನು ಗೆಲ್ಲಿಸಿ ಅದ್ಬುತವಾದ ಕಾರ್ಯಮಾಡಿದ್ದಾರೆ. ಮತದಾರರು ಸಹ ಬಿಜೆಪಿಯಗೆ ಮತ ನೀಡಿ ಆರ್ಶಿವದಿಸಿದ್ದಾರೆ. ಮತದಾರರ ನಂಬಿಕೆಯಂತೆ ನಾವೆ ಅಧಿಕಾರಕ್ಕೆ ಬರುತ್ತೆವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಲಬುರಗಿ ಸೇರಿದಂತೆ ಮೂರು ಕಡೆ ನಮ್ಮವರೇ ಮೇಯರ್ ಆಗುತ್ತಾರೆ. ಮೂರೂ ಕಡೆ ಅಧಿಕಾರಕ್ಕೆ ಬರುವುದು ನಮ್ಮ ಪಕ್ಷದ ಸ್ಟ್ಯಾಟರ್ಜಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರಮಲ್‌ ಕುಮಾರ್ ಸುರಾನಾ ಹೇಳಿದರು. ಜೆಡಿಎಸ್ ಒಪ್ಪುತ್ತದೆಂಬ ವಿಶ್ವಾಸವಿದೆ. ಕಲಬುರಗಿ ಅಭಿವೃದ್ಧಿ ದೃಷ್ಟಿಯಿಂದ ನಾವು ಹೊಂದಾಣಿಕೆ ಮಾಡಿಕೊಳ್ಳುತ್ತೇವೆ ಎಂದರು.

Spread the love

Related Articles

Leave a Reply

Your email address will not be published. Required fields are marked *

Back to top button