Breaking NewsLatestಕ್ರೀಡೆ

ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ: ಆಯ್ಕೆ ಸಮಿತಿಯಲ್ಲಿ ವೆಂಕಟೇಶ್ ಪ್ರಸಾದ್

ಹೊಸದಿಲ್ಲಿ: ಕ್ರೀಡಾ ಸಾಧಕರಿಗೆ ನೀಡಲಾಗುವ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವೆಂಕಟೇಶ್ ಪ್ರಸಾದ್ ಸೇರಿದ್ದಾರೆ.

ಕೇಂದ್ರ ಕ್ರೀಡಾ ಇಲಾಖೆಯು ಆಯ್ಕೆ ಮಾಡಿದ ಆಯ್ಕೆ ಸಮಿತಿಯಲ್ಲಿ ಬಾಕ್ಸರ್ ಸವಿತಾ ದೇವಿ, ಪ್ಯಾರಾಲಿಯನ್ ದೇವೇಂದ್ರ ಝಝಾರಿಯಾ, ಹಾಕಿ ಕೋಚ್ ಬಲದೇವ್ ಸಿಂಗ್ ಸೇರಿದಂತೆ ವಿವಿಧ ವಿಭಾಗದ 12 ಸದಸ್ಯರು ಸೇರಿದ್ದಾರೆ.

ಸಮಿತಿ:
ಮುಕುಂದಮ್ ಶರ್ಮಾ (ಸುಪ್ರಿಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ); ಅಂಜಲಿ ಭಾಗವತ್ (ಶೂಟಿಂಗ್), ವೆಂಕಟೇಶ್ ಪ್ರಸಾದ್ (ಕ್ರಿಕೆಟ್); ಸವಿತಾ ದೇವಿ (ಬಾಕ್ಸರ್); ಬಲದೇವ್ ಸಿಂಗ್ (ಹಾಕಿ ಕೋಚ್); ದೇವೇಂದ್ರ ಝಝಾರಿಯಾ (ಪ್ಯಾರಾಲಿಂಪಿಯನ್); ಅಂಜುಂ ಚೋಪ್ರಾ (ಪತ್ರಕರ್ತೆ/ವೀಕ್ಷಕ ವಿವರಣೆಗಾರ್ತಿ), ವಿಕ್ರಾಂತ್ ಗುಪ್ತಾ (ಪತ್ರಕರ್ತ/ ವೀಕ್ಷಕ ವಿವರಣೆಗಾ); ವಿಜಯ್ ಲೋಕಪಳ್ಳಿ (ಪತ್ರಕರ್ತ/ವೀಕ್ಷವಿವರಣೆಗಾರ); ಸಂದೀಪ್ ಪ್ರಧಾನ್ (ಮಹಾ ನಿರ್ದೇಶಕರು , ಸಾಯ್); ರಾಧಿಕಾ ಶ್ರೀಮಾನ್ (ಕಾರ್ಯಕಾರಿ ನಿರ್ದೇಶಕರು/ ಟೀಮ್ ಸಾಯ್); ಅತುಲ್ ಸಿಂಗ್ ( ಜಂಟಿನಿರ್ದೇಶಕರು, ಅಭಿವೃದ್ಧಿ)

Spread the love

Related Articles

Leave a Reply

Your email address will not be published. Required fields are marked *

Back to top button