ಮನರಂಜನೆಸಿನಿಮಾಸೆಲೆಬ್ರಿಟಿ
Krathi Sanon: ಮಾಧ್ಯಮಗಳ ಮೇಲೆ ಕಿಡಿಕಾರಿದ ನಟಿ ಕೃತಿ ಸನೋನ್

ಪ್ರಭಾಸ್ ಅವರ ಆದಿಪುರುಷ ಚಿತ್ರದಲ್ಲಿ ಸೀತೆಯ ಪತ್ರದಲ್ಲಿ ನಟಿಸುತ್ತಿರುವ ಬಾಲಿವುಡ್ ನಟಿ ಕೃತಿ ಸನೋನ್ ಅವರು ಇತ್ತೀಚೆಗೆ ಮಾಧ್ಯಮಗಳ ಮೇಲೆ ಬೇಸಗೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಇತ್ತೀಚೆಗಷ್ಟೇ ಹೃದಯಾಘಾತದಿಂದ ನಿಧನರಾದ ಟಿವಿ ನಟ ಸಿದ್ದಾರ್ಥ್ ಶುಕ್ಲಾ ಅವರ ಸಾವಿನ ಸುದ್ದಿ ಮಾಧ್ಯಮಗಳಲ್ಲಿ ಆವರಿಸಲ್ಪಟ್ಟಿದ್ದು, ಈ ಬಗ್ಗೆ ಅನೇಕರು ಕೋಪಗೊಂಡಿದ್ದರು. ಮನುಷ್ಯತ್ವ ಇಲ್ಲದವರು ಎಂದು ಟೀಕಿಸಿದ್ದರು. ಇದೀಗ ನಟಿ ಕೃತಿ ಸನೋನ್ ಅವರು ಈ ವಿಚಾರವಾಗಿ ಮಾಧ್ಯಮಗಳ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ.
ಬಾಲಿವುಡ್ ನಟಿ ಕೃತಿ ಸನೋನ್ ಅವರು, ನಮ್ಮ ಮಾಧ್ಯಮಗಳು ಸಾವಿನ ಸುದ್ದಿಯನ್ನು ಇಷ್ಟು ಅಮಾನವೀಯತೆಯಿಂದ ನಡೆದುಕೊಳ್ಳುತ್ತಿರುವುದನ್ನು ನೋಡಿ ಮನಸ್ಸಿಗೆ ಬೇಸರವಾಗುತ್ತಿದೆ. ಇದು ಸುದ್ದಿಯಲ್ಲ, ಮನರಂಜನೆಯು ಅಲ್ಲ. ಕೆಲವು ಗಡಿಗಳನ್ನು ಎಳೆಯಿರಿ. ಆತ್ಮಸಾಕ್ಷಿಯನ್ನು ಹೊಂದಿರಿ ಎಂದು ಕಿಡಿಕಾರಿದ್ದಾರೆ




