Breaking NewsLatestವಿದೇಶ

ಪಂಜ್​ಶಿರ್: ತಾಲಿಬಾನ್ ವಶವೆಂಬುದು ಸುಳ್ಳೆಂದ ಎನ್​ಆರ್​ಎಫ್

ಕಾಬೂಲ್: ಪಂಜ್​ಶಿರ್ ಕಣಿವೆಯಲ್ಲಿ ತಾಲಿಬಾನಿಗಳ ವಿರುದ್ಧದ ಹೋರಾಟ ಮುಂದುವರಿದಿದ್ದರೂ, ಪಂಜ್​ಶಿರ್ ಪೂರ್ತಿ ತನ್ನ ವಶವಾಗಿರುವುದಾಗಿ ತಾಲಿಬಾನ್ ಹೇಳಿಕೊಂಡಿದೆ.

ಅಫ್ಘಾನಿಸ್ತಾನದ ನ್ಯಾಷನಲ್ ರೆಸಿಸ್ಟನ್ಸ್ ಫ್ರಂಟ್ (ಎನ್​ಆರ್​ಎಫ್) ಪಡೆಯ ಹಿಡಿತದಲ್ಲಿದ್ದ ಪಂಜ್​ಶಿರ್ ಮೇಲೆ ಸಂಪೂರ್ಣ ಹಿಡಿತ ಸಾಧಿಸಿರುವುದಾಗಿ ತಾಲಿಬಾನ್ ಘೋಷಿಸಿದೆ.

ಪಂಜ್​ಶಿರ್ ಪ್ರಾಂತ್ಯದ ಗವರ್ನರ್ ಕಚೇರಿಯಲ್ಲಿ ತಾಲಿಬಾನ್ ಯೋಧರು ನಿಂತಿರುವ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ.

ಆದರೆ, ತಾನಿಬಾನ್ ಪ್ರತಿಪಾದಿಸುತ್ತಿರುವುದು ಸುಳ್ಳೆಂದು ಎನ್​ಆರ್​ಎಫ್ ಹೇಳಿದೆ. ನಮ್ಮ ಯೋಧರೂ ಇನ್ನೂ ಪಂಜ್​ಶಿರ್ ಪ್ರಾಂತ್ಯದಲ್ಲಿ ಕದನ ಮುಂದುವರಿಸಿರುವುದಾಗಿ ಅದು ಹೇಳಿದೆ.

ನ್ಯಾಯ ಮತ್ತು ಸ್ವಾತಂತ್ರ್ಯ ದೊರೆಯುವವರೆಗೂ ನಮ್ಮ ಹೋರಾಟ ತಾಲಿಬಾನಿಗಳು ಮತ್ತವರ ಜೊತೆ ನಿಂತವರ ವಿರುದ್ಧ ಮುಂದುವರಿಯಲಿದೆ ಎಂದು ಎನ್​ಆರ್​ಎಫ್ ಟ್ವೀಟ್ ಮಾಡಿದೆ.

Spread the love

Related Articles

Leave a Reply

Your email address will not be published. Required fields are marked *

Back to top button