ಬೆಳಗಾವಿ
ಸಂಬಂಧಿಗಳಿಂದಲೇ ಬಿಲ್ಡಿಂಗ್ ಮೇಲಿಂದ ವ್ಯಕ್ತಿ ಕೆಳಗೆ ತಳ್ಳಲು ಯತ್ನ

ಬೆಳಗಾವಿ: ವ್ಯಕ್ತಿಯೊಬ್ಬನಿಗೆ ಯದ್ವಾತದ್ವಾ ಥಳಿಸಿ ಬಿಲ್ಡಿಂಗ್ ಮೇಲಿಂದ ಕೆಳಗೆ ತಳ್ಳಲು ಯತ್ನಿಸಿರುವ ಅಮಾನವೀಯ ಘಟನೆ ಕುಂದಾನಗರಿ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿಯ ಹೃದಯ ಭಾಗವಾಗಿರುವ ಕಡೋಲ್ಕರ್ ಗಲ್ಲಿಯಲ್ಲಿ ಈ ಘಟನೆ ನಡೆದಿದ್ದು. ಕೌಟುಂಬಿಕ ಕಲಹದ ಹಿನ್ನೆಲೆ ವ್ಯಕ್ತಿಯನ್ನು ಒಂದೇ ಕುಟುಂಬದವರು ಥಳಿಸಿದ್ದಾರೆ. ಮೊದಲ ಮಹಡಿಯ ಬಾಲ್ಕನಿಯಿಂದ ಕೆಳಗೆ ತಳ್ಳಲು ಯತ್ನಿಸಿದ್ದಾರೆ. ವ್ಯಕ್ತಿಯ ಚೀರಾಟ ನೋಡಿ ಸ್ಥಳದಲ್ಲಿ ಜನರು ಜಮಾವಣೆ ಆಗಿದ್ದಾರೆ. ಜನರ ಜಮಾವಣೆ ಆಗುತ್ತಿದ್ದಂತೆ ಕೆಳಗೆ ತಳ್ಳದೇ ಮೇಲಕ್ಕೆ ಕುಟುಂಬಸ್ಥರು ಎತ್ತಿಕೊಂಡಿದ್ದಾರೆ.
ವ್ಯಕ್ತಿಯನ್ನ ಕೆಳಗೆ ತಳ್ಳುವ ದೃಶ್ಯವನ್ನು ಸ್ಥಳೀಯರು ವಿಡಿಯೋ ಮಾಡಿದ್ದು, ವಿಡಿಯೋ ವೈರಲ್ ಆಗಿದೆ. ಬೆಳಗಾವಿ ಖಡೇಬಜಾರ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.




