ಮನರಂಜನೆಸಿನಿಮಾಸೆಲೆಬ್ರಿಟಿ
ತನ್ನ ಬೆಸ್ಟ್ ಫ್ರೆಂಡ್ಸ್ ಗಳ ಜೊತೆ ಗೋವಾ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿರುವ ನಟಿ ಸಮಂತಾ

ಟಾಲಿವುಡ್ ನಟಿ ಸಮಂತಾ ಅಕ್ಕಿನೇನಿ ಅವರು ಇತ್ತೀಚೆಗೆ ತನ್ನ ಬೆಸ್ಟ್ ಫ್ರೆಂಡ್ ಶಿಲ್ಪಾ ರೆಡ್ಡಿ ಅವರೊಂದಿಗೆ ಗೋವಾದಲ್ಲಿ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ ಕಾಲಕಳೆಯುತ್ತಿದ್ದಾರೆ.
ನಟಿ ಸಮಂತಾ ಅವರು ಅಲ್ಲಿ ಸೈಕ್ಲಿಂಗ್ ಮತ್ತು ಕಯಾಕಿಂಗ್ ನ ಫೋಟೊ ಮತ್ತು ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ನಟಿ ಶನಿವಾರ ಮುಂಜಾನೆ ಕಯಕಿಂಗ್ ಮಾಡಿರುವುದನ್ನು ನೋಡಬಹುದು. ಆ ವೇಳೆ ಅವರು ತುಂಬಾ ಸಂತೋಷದಿಂದಿದ್ದರು.
ಇದಕ್ಕೆ ಅವರ ಅಭಿಮಾನಿಗಳು ಮಾತ್ರವಲ್ಲದೇ ವೆಂಕಟೇಶ್ ದಗ್ಗುಬಾಟಿ ಪುತ್ರಿ ಆಶ್ರಿತಾ ಮತ್ತು ರಾಣಾ ದಗ್ಗುಬಾಟಿ ಪತ್ನಿ ಮಿಹಿಕಾ ಅವರು ಕೂಡ ಕಾಮೆಂಟ್ ಮಾಡಿದ್ದಾರೆ. ಅಲ್ಲದೇ ಈ ನಡುವೆ ನಟಿ ಸಮಂತಾ ಮತ್ತು ಅವರ ಪತ್ನಿ ನಾಗಚೈತನ್ಯ ಅವರ ನಡುವೆ ಸಂಬಂಧ ಸರಿಯಿಲ್ಲ, ವಿಚ್ಛೇದನದ ಮಾತು ಕೂಡ ಕೇಳಿಬರುತ್ತಿದೆ ಎನ್ನಲಾಗಿದೆ.




