Breaking Newsಇತರ ಕ್ರೀಡೆಕ್ರೀಡೆ
Pro Kabaddi Auction: 1.65 ಕೋಟಿ ರೂಗಳಿಗೆ ಯುಪಿ ಯೋಧಾಸ್ ತಂಡಕ್ಕೆ ಪ್ರದೀಪ್ ನರ್ವಾಲ್

ಬೆಂಗಳೂರು: ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲೇ ದಾಖಲೆ ಎಂಬಂತೆ ದಾಖಲೆಗಳ ಸರದಾರ ಪ್ರದೀಪ್ ನರ್ವಾಲ್ ಬೃಹತ್ ಮೊತ್ತಕ್ಕೆ ಯುಪಿ ಯೋಧಾಸ್ ತಂಡಕ್ಕೆ ಹರಾಜಾಗಿದ್ದಾರೆ.
ಹಿಂದೆ ಗರಿಷ್ಠ ಮೊತ್ತ 1.5 ಕೋಟಿ ರೂ. ಆಗಿತ್ತು.
ಇದುವರೆಗೂ ಪಾಟ್ನಾ ಪೈರೇಟ್ಸ್ ತಂಡದಲ್ಲಿದ್ದು, ಆ ತಂಡ ಚಾಂಪಿಯನ್ ಪಟ್ಟ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಪ್ರದೀಪ್ ನರ್ವಾಲ್ ನಿಜವಾಗಿಯೂ ಪ್ರೋ ಕಬಡ್ಡಿ ಲೀಗ್ ನಲ್ಲಿ ಅತ್ಯಂತ ಮೌಲ್ಯಯುತ ಆಟಗಾರ.
ದಿನದ ಇನ್ನೊಂದು ಖರೀದಿಯಲ್ಲಿ ತೆಲುಗು ಟೈಟಾನ್ಸ್ ಪಡೆ 1.30 ಕೋಟಿ ರೂ.ಗಳಿಗೆ ಸಿದ್ಧಾರ್ಥ ದೇಸಾಯಿ ಅವರನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.
ಹರಾಜು ಪ್ರಕ್ರಿಯೆ ಮಂಗಳವಾರವೂ ಮುಂದುವರಿಯಲಿದೆ
