ಉತ್ತರ ಕನ್ನಡಜಿಲ್ಲಾ ಸುದ್ದಿ

ಅಫ್ಘಾನಿಸ್ತಾನದಿಂದ ಸುರಕ್ಷಿತವಾಗಿ ಕಾರವಾರಕ್ಕೆ ಬಂದ ಹೇಮಂತ್ ಕಾಂಬ್ಳೆ

ಕಾರವಾರ : ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ಆಕ್ರಮಿಸಿಕೊಂಡ ನಂತರ ವಿದೇಶಿಗರಿಗೆ ತಮ್ಮ ನೆಲಕ್ಕೆ ಬರಲು ಹರಸಾಹಸ ಪಡುವ ಸ್ಥಿತಿ ಇದೆ. ಹೀಗಿರುವಾಗ ಅಫ್ಘಾನಿಸ್ತಾನದಲ್ಲಿ ಅಮೇರಿಕಾ ಸೇನಾ ಕ್ಯಾಪ್ ನಲ್ಲಿ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ ಕಾರವಾರ ತಾಲೂಕಿನ ಕಡವಾಡದ ಹೇಮಂತ್ ಕಾಂಬ್ಳೆ ಕಾರವಾರಕ್ಕೆ ಆಗಮಿಸಿದರು.

ಕಾಬೂಲ್ ಏರ್ ಪೋರ್ಟ್ ನಿಂದ ಹೊರಟ ಅವರು ನೇರವಾಗಿ ದುಬೈಗೆ ಬಂದು ಅಲ್ಲಿಂದ ದೆಹಲಿ ನಂತರ ಗೋವಾಕ್ಕೆ ಬಂದು ಕಾರವಾರಕ್ಕೆ ಮರಳಿದ್ದಾರೆ.

ತಾನು ಅಮೇರಿಕಾ ಸೈನ್ಯದ ಕ್ಯಾಂಪ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದೆ. ನನಗೆ ಹೊರಗೆ ಆಗುವ ಘಟನೆಗಳು ತಿಳಿಯುತ್ತಿರಲಿಲ್ಲ. ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ನಮಗೆ ನಮ್ಮ ದೇಶಕ್ಕೆ ಮರಳಲು ಸೂಚಿಸಲಾಯ್ತು. ಭದ್ರತೆ ಮೂಲಕ ಕಾಬೂಲ್ ಏರ್ ಪೋರ್ಟಗೆ ಕರೆತರಲಾಯಿತು. ಅಲ್ಲಿ ಆರು ಸಾವಿರಕ್ಕೂ ಹೆಚ್ಚು ಅಮೇರಿಕಾ ಸೈನಿಕರಿದ್ದರು. ಹೊರಗೆ ಏನಾಗುತ್ತಿದೆ ಅನ್ನುವುದು ತಿಳಿದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಏರ್ ಪೋರ್ಟ್​​​ಗೆ ಬಂದ ತಕ್ಷಣ ನಮ್ಮನ್ನು ಭಾರತಕ್ಕೆ ಕರೆತರಲಾಯಿತು. ಅಲ್ಲಿ ನಮಗೆ ಯಾವುದೇ ಸಮಸ್ಯೆ ಆಗಲಿಲ್ಲ ಎಂದು ತಾವು ಬಂದ ಕುರಿತು ಹೇಮಂತ ಕಾಂಬ್ಳೆ ಮಾಹಿತಿ ನೀಡಿದರು.

Related Articles

Leave a Reply

Your email address will not be published. Required fields are marked *

Back to top button