ಇತರ ಕ್ರೀಡೆಕ್ರೀಡೆ
ಭಾವಿನಾ ಪಟೇಲ್ ಗೆ 3 ಕೋಟಿ ರೂ. ನಗದು ಬಹುಮಾನ

ಟೋಕಿಯೋ: ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಐತಿಹಾಸಿಕ ಬೆಳ್ಳಿ ಪದಕ ಗೆದ್ದಿರುವ ಗುಜರಾತ್ ನ ಭಾವಿನಾ ಪಟೇಲ್ ಅವರಿಗೆ ಅಲ್ಲಿಯ ಸರಕಾರ 3 ಕೋಟಿ ರೂ.ಗಳ ನಗದು ಬಹುಮಾನ ಘೋಷಿಸಿದೆ.
ಟೇಬಲ್ ಟೆನಿಸ್ ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಭಾವಿನಾ ಪಟೇಲ್ ಮೆಹಸಾನ ಜಿಲ್ಲೆಯ ಸುಂಧಿಯಾ ಗ್ರಾಮದವರು. ಭಾವಿನಾ ಅವರಿಗೆ ಅಭಿನಂದನೆ ಸಲ್ಲಿಸಿರುವ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು 3 ಕೋಟಿ ರೂ.ಗಳ ನಗದು ಬಹುಮಾನ ಪ್ರಕಟಿಸಿದ್ದಾರೆ.
ಇದನ್ನೂ ಓದಿ: Tokyo Paralympics: ಐತಿಹಾಸಿಕ ಬೆಳ್ಳಿ ಗೆದ್ದ ಭಾವಿನಾ ಪಾಟೀಲ್
34 ವರ್ಷದ ಭಾವಿನಾ ಹುಟ್ಟಿದ 12 ತಿಂಗಳಲ್ಲೇ ಪೋಲಿಯೋಗೆ ತುತ್ತಾಗಿದ್ದರು.




