ಮಾರ್ಕೆಟ್ ನಲ್ಲಿ ಸೊಂಟಕ್ಕೆ ರಿವಾಲ್ವರ್ ಇಟ್ಟುಕೊಂಡು ತಿರುಗುತ್ತಿದ್ದ ವ್ಯಕ್ತಿ ವಶಕ್ಕೆ

ಬೆಳಗಾವಿ: ಖಡೇ ಬಜಾರ ರಸ್ತೆಯಲ್ಲಿ ಆರ್ಯನ್ ಹೋಟೆಲ್ ಎದುರಿಗೆ ಸೊಂಟಕ್ಕೆ ರಿವಾಲ್ವರ್ ಇಟ್ಟುಕೊಂಡು ಸುತ್ತಾಡುತ್ತಿದ್ದ ವ್ಯಕ್ತಿನ್ನ ಸಾರ್ವಜನಿಕರ ದೂರಿನ ಮೇರೆಗೆ ವಶಕ್ಕೆ ಪಡೆದು ವಿಚಾರಣೆ ನಡೆಸಿರುವ ಘಟನೆ ನಡೆದಿದೆ.
ಕಾನೂನು ರೀತ್ಯ ಸಾರ್ವಜನಿಕರಲ್ಲಿ ಭಯದ ವಾತಾವರಣ ಹುಟ್ಟಿಸಿಕೊಂಡು ಸ ಚುಣಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದ ರು ಸಹಿತ ಒಬ್ಬ ವ್ಯಕ್ತಿ ತನ್ನ ಸೊಂಟದಲ್ಲಿ ರೀವಾಲ್ವರ ಕಟ್ಟಿಕೊಂಡು ಖಡೇಬಜಾರ ರಸ್ತೆಯಲ್ಲಿ ತಿರುಗಾಡಿ ಚುಣಾವಣಾ ನೀತಿ ಸಂಹಿತೆ ಮತ್ತು ಶಸ್ತ್ರಾಸ್ತ್ರ ಕಾಯ್ದೆ ನಿಯಮಗಳನ್ನು ಉಲ್ಲಂಘಿಸಿ ದ್ದು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಡಿಸಿಪಿ ವಿಕ್ರಂ ಅಮಟೆ ಸೂಚನೆ ಮೇರೆಗೆ ಖಡೇಬಜಾರ ಪೊಲೀಸ್ ಠಾಣೆಯಲ್ಲಿ ಸರ್ಕಾರದ ಪರವಾಗಿ ಆರೋಪಿತನ ಮೇಲೆ ಸರ್ಕಾರದ ಪರವಾಗಿ ಪ್ರಕರಣ ದಾಖಲಿಸಿದ್ದು , 188, 268 ಐಪಿಸಿ ಹಾಗೂ 30 ಆಯುದ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡು ಇದರಲ್ಲಿಯ ಆರೋಪಿತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿ ಆರೋಪಿತನಿಂದ ಪಿಸ್ತೂಲು ಹಾಗೂ ಅದರ ಲೈಸನ್ಸ್ ನ್ನು ಜಪ್ತಿ ಮಾಡಿಕೊಂಡಿದ್ದಾರೆ. ಅಲ್ಲದೆ ಆರೋಪಿತ ವ್ಯಕ್ತಿಯ ಆಯುಧ ಲೈಸನ್ಸ್ನ್ನು ರದ್ದು ಪಡಿಸಿ ಆದೇಶ ಹೊರಡಿಸಲಾಗಿದೆ.




