Breaking NewsLatest

ಬೆಂಗಳೂರಿನಲ್ಲಿ ಬಾಯ್ಲರ್ ಸ್ಫೋಟ: ಇಬ್ಬರು ಸಜೀವ ದಹನ, ನಾಲ್ವರಿಗೆ ಗಂಭೀರ ಗಾಯ

ಬೆಂಗಳೂರು : ಬಾಯ್ಲರ್ ಸ್ಪೋಟಗೊಂಡ ಪರಿಣಾಮ ಇಬ್ಬರ ಸಜೀವವಾಗಿ ದಹನವಾಗಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಮಾಗಡಿ ರಸ್ತೆಯ ಅಂಜನ್ ಥಿಯೇಟರ್ ಸಮೀಪದ ಎಂ.ಎಂ ಪುಡ್ ಪ್ಯಾಕ್ಟರಿಯಲ್ಲಿ ನಡೆದಿದೆ.

ಮೃತರನ್ನು ಸೌರಭ ಹಾಗೂ ಮನೀಷ್ ಎಂದು ಗುರುತಿಸಲಾಗಿದೆ. ಪ್ಯಾಕ್ಟರಿಯಲ್ಲಿ ಆರು ಜನರು ಕೆಲಸ ಮಾಡುತ್ತಿದ್ದರು. ಈ ವೇಳೆ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ, ಈ ಘಟನೆ ನಡೆದಿದೆ ಎನ್ನಲಾಗಿದೆ. ಸಿಲಿಂಡರ್ ಸ್ಪೋಟದಿಂದ ಅಕ್ಕಪಕ್ಕದ ನಿವಾಸಿಗಳಿಗೂ ಗಾಯಗಳಾಗಿದೆ ಎನ್ನಲಾಗಿದೆ.

ಗಂಭೀರವಾಗಿ ಗಾಯಗೊಂಡವರಲ್ಲಿ ಸಚಿನ್ (35), ಸೌರವ್(21), ಧನಲಕ್ಷ್ಕಿ ( 50), ಶಾಂತಿ(52) ಸೇರಿದ್ದಾರೆ. ಸ್ಥಳೀಯರಾದ ಧನಲಕ್ಷ್ಮಿ ,ಶಾಂತಿ ಗಂಭೀರ ಗಾಯಗಳಾಗಿವೆ

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದಂತ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Spread the love

Related Articles

Leave a Reply

Your email address will not be published. Required fields are marked *

Back to top button