
ಬೆಂಗಳೂರು: ಬಲೂನ್ ಸೇರಿದಂತೆ ವಿವಧ ಅಟಿಕೆ ವಸ್ತುಗಳನ್ನು ರಸ್ತೆಗಳಲ್ಲಿ ವ್ಯಾಪಾರ ಮಾಡುತ್ತಾ ವಿಜಯನಗರ ಟೋಲ್‌ಗೇಟ್ ಮೆಟ್ರೋ ಕೆಳಗೆ ಟೆಂಟ್‌ಗಳಲ್ಲಿ ಜೀವನ ಸಾಗಿಸುತ್ತಿದ್ದ 15 ಬಡ ಕುಟುಂಬಗಳಿಗೆ ಬಾಲಾಜಿ ಗ್ರೂಪ್ ವತಿಯಿಂದ ಇಂದು ಬೆಳಗ್ಗೆ ದಿನಸಿ ವಿತರಿಸಲಾಯಿತು.
ನಿನ್ನೆ ಪೋಲೀಸರು ಏಕಾಏಕಿ ಈ ಕುಟುಂಬಗಳನ್ನು ಎತ್ತಂಗಡಿ ಮಾಡಿದ್ದರು. ಈ ಬಡ ಕುಟುಂಬಗಳು ದಿಕ್ಕುಕಾಣದೇ ನೆಲೆಗಾಗಿ ಅಲೆಯುತ್ತಿದ್ದಾರೆ. ಹತ್ತಾರು ಮಕ್ಕಳನ್ನು ಕಟ್ಟಿಕೊಂಡು ಉಳಿದುಕೊಳ್ಳಲು ಜಾಗ ಹುಡುಕಾಡುತ್ತಿದ್ದಾರೆ.
ಬಾಲಾಜಿ ಗ್ರೂಪ್ ಈ ಕುಟುಂಬಗಳ ನೋವಿಗೆ ಸ್ಪಂದಿಸಿ ದಿನಸಿ ವಿತರಿಸಿ ನೆರವಾಗಿದೆ.
ಗ್ರೂಪ್ನ ಮೀಡಿಯಾ ಸಲಹೆಗಾರ ಮತ್ತು 24×7 ಲೈವ್ ಕನ್ನಡದ ಪ್ರಧಾನ ಸಂಪಾದಕ ಶಶಿಧರ್ ಭಟ್ ಅವರು ಈ ಕುಟುಂಬಗಳಿಗೆ ದಿನಸಿ ವಿತರಿಸಿದರು.
ಬಾಲಾಜಿ ಗ್ರೂಪ್ ಸಂಸ್ಥಾಪಕರು ಮತ್ತು ಆಡಳಿತ ಮಂಡಳಿ ಕೋವಿಡ್ ಸಂಕಷ್ಟದಲ್ಲಿರುವ ಎಲ್ಲರಿಗೂ ರಾಜ್ಯದ ವಿವಿಧೆಡೆ ನೆರವು ನೀಡುವುದರಲ್ಲಿ ತೊಡಗಿದೆ. ಈಗಾಗಲೇ ವಿವಿಧೆಡೆ ಬಡವರು, ಕೂಲಿ ಕಾರ್ಮಿಕರು ಎಚ್ಐವಿ ಬಾಧಿತ ಮಕ್ಕಳಿಗೆ ನೆರವು ನೀಡಿದೆ.





