ಬಾಗಲಕೋಟೆ: 9 ರಿಂದ 12 ತರಗತಿ ವರೆಗೆ ಶಾಲಾ ಕಾಲೇಜು ಆರಂಭ: ಹೂ ನೀಡಿ ವಿದ್ಯಾರ್ಥಿಗಳಿಗೆ ಸ್ವಾಗತ

ಬಾಗಲಕೋಟೆ: ಇಂದಿನಿಂದ ಶಾಲಾ ಕಾಲೇಜು ಆರಂಭ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯಲ್ಲೂ ಶಾಲಾ ಕಾಲೇಜು ಆರಂಭವಾಗಿದ್ದು, ಹೂ ನೀಡಿ ವಿದ್ಯಾರ್ಥಿಗಳನ್ನು ಸ್ವಾಗತಿಸಿಕೊಳ್ಳಲಾಗಿದೆ.
ಬಾಗಲಕೋಟೆ ನಗರದ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಹೂ ನೀಡಿ ಸ್ವಾಗತ ಕೋರಿದರು. ಶಾಲೆಯ ಕೊಠಡಿಗಳನ್ನು ಸ್ಯಾನಿಟೈಜ್ ಮಾಡಲಾಗಿದೆ. ಶಾಲೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು. ಶಾಲೆಯ ಮುಂದೆ ರಂಗವಲ್ಲಿ ಹಾಕಲಾಗಿದ್ದು. ಜೊತೆಗೆ ವಿದ್ಯಾರ್ಥಿಗಳು ರಂಗವಲ್ಲಿ ಬಿಡಿಸಿದರು. ಮಕ್ಕಳಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ ತರಗತಿ ಕೊಠಡಿಯೊಳಗೆ ಬಿಡಲಾಗಿದೆ.
ಪ್ರೌಢಶಾಲೆ 9ಹಾಗೂ 10ನೇ ತರಗತಿ ಪಿಯುಸಿ ತರಗತಿಗಳನ್ನು ಎಸ್ಓಪಿ ನಿಯಮದಂತೆ ಆರಂಭಿಸಲು ಸರ್ಕಾರ ಆದೇಶಿಸಿತ್ತು. ಅದರಂತೆ ವಿದ್ಯಾರ್ಥಿಗಳು ಕೂಡಾ ಖುಷಿಯೊಂದಿಗೆ ಶಾಲಾ ಕಾಲೇಜುಗಳಿಗೆ ಆಗಮಿಸಿ, ಪಾಠವನ್ನು ಆಲಿಸುತ್ತಿದ್ದಾರೆ. ಶಾಲಾ ಕಾಲೇಜು ಆರಕಭವಾಗಿರುವದಕ್ಕೆ ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸ ಸಂತಸ ಹಂಚಿಕೊಳ್ಳುತ್ತಿದ್ದಾರೆ.
ಇನ್ನು ನವನಗರದ ಎಸ್ಬಿ ಪಾಟೀಲ್ ಪದವಿ ಪೂರ್ವ ಕಾಲೇಜು, ಪ್ರೌಢಶಾಲೆಯಲ್ಲೂ ಕೂಡಾ ಸಂಭ್ರಮ ಮನೆಮಾಡಿದ್ದು, ತೆರಳಿ ತೋರಣ ಕಟ್ಟಿ ವಿದ್ಯಾರ್ಥಿಗಳನ್ನು ಕೋವಿಡ್ ನಿಯಮ ಪಾಲಿನೆಯೊಂದಿಗೆ ಕೊಠಡಿಯೊಳಗೆ ಬಿಡಲಾಗಿದ್ದು, ಪ್ರತಿ ಡೆಸ್ಕ್ ಗೆ ಓರ್ವ ವಿದ್ಯಾರ್ಥಿ ಕುಳಿತು ಪಾಠವನ್ನು ಆಲಿಸುತ್ತಿದ್ದಾರೆ.




