ಕೊಡಗುಜಿಲ್ಲಾ ಸುದ್ದಿ

ರಕ್ಷಾ ಬಂಧನ – ಕೊರೊನಾ ವಾರಿಯರ್ಸ್ ಗಳಿಗೆ ರಾಖಿ ಕಟ್ಟುವ ಮೂಲಕ ಆಚರಣೆ

ಕೊಡಗು : ಇಂದು ರಕ್ಷಾ ಬಂಧನ. ಭಾರತದಲ್ಲಿ ಶ್ರಾವಣ ಮಾಸದಲ್ಲಿ ಆಚರಿಸುವ ಈ ಹಬ್ಬದಲ್ಲಿ ಸಹೋದರಿಯರು ತಮ್ಮ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟಿ ಆರತಿ ಬೆಳಗಿ, ಸಹೋದರನ ಆಶೀರ್ವಾದ ಪಡೆಯುತ್ತಾರೆ.

ರಾಖಿ ಕಟ್ಟಿಸಿಕೊಂಡ ಸಹೋದರ ತನ್ನ ಮುದ್ದಿನ ಸಹೋದರಿಗೆ ಸಿಹಿತಿನಿಸು, ಹೊಸ ಬಟ್ಟೆ ಅಥವಾ ಹಣ ಕೊಟ್ಟು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಈ ಮೂಲಕ ಸಹೋದರ-ಸಹೋದರಿಯರ ಭಾವನೆಯನ್ನು ದಟ್ಟಗೊಳಿಸುವ ಹಬ್ಬ ಇದಾಗಿದೆ.

ರಕ್ಷಾ ಬಂಧನ ಪ್ರಾಚೀನ ಕಾಲದಿಂದ ಬಹಳ ಪ್ರಾಮುಖ್ಯತೆ ಹೊಂದಿದೆ. ರಕ್ಷಾಬಂದನ ಅಥವಾ ‘ರಾಖಿ’ ಹಬ್ಬವನ್ನು ಇತ್ತೀಚಿನ ವರ್ಷಗಳಲ್ಲಿ ಭಾರತದಾದ್ಯಂತ ಎಲ್ಲರೂ ಆಚರಿಸುತ್ತಾರೆ. ಅಣ್ಣ ತಂಗಿಯರ ಬಾಂಧವ್ಯವನ್ನು ಪ್ರತಿಯೊಬ್ಬರೂ ಭಾವನಾತ್ಮಕವಾಗಿ ಸ್ಮರಿಸುವ ಈ ದಿನ ಬಾಲ್ಯದ ಅನೇಕ ಸಿಹಿ ಕಹಿ ನೆನಪುಗಳನ್ನು ನಮ್ಮ ಮನದಲ್ಲಿ ಮೂಡಿಸುತ್ತದೆ.

ಕೊಡಗಿನ ಸೊಮವಾರಪೇಟೆ ತಾಲೂಕು ಮಹಿಳಾ ಮೊರ್ಚದಿಂದ ರಕ್ಷ ಬಂದನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

Spread the love

Related Articles

Leave a Reply

Your email address will not be published. Required fields are marked *

Back to top button