ಮನರಂಜನೆಸಿನಿಮಾಸೆಲೆಬ್ರಿಟಿ
ಶ್ರೀಮುಖಿ ನಟಿಸಿರುವ ಕ್ರೇಜಿ ಅಂಕಲ್ಸ್ ಚಿತ್ರಕ್ಕೆ ಎದುರಾಗಿದೆ ಸಂಕಷ್ಟ

ಶ್ರೀಮುಖಿ ನಟಿಸಿರುವ ಕ್ರೇಜಿ ಅಂಕಲ್ಸ್ ತೆಲುಗು ಚಿತ್ರ ಆಗಸ್ಟ್ 19ರಂದು ಬಿಡುಗಡೆಯಾಗಿದೆ. ಇದೀಗ ಈ ಚಿತ್ರವು ಸಂಕಷ್ಟಕ್ಕೆ ಸಿಲುಕಿದೆ ಎನ್ನಲಾಗಿದೆ.
ಕೆಲವು ದಿನಗಳ ಹಿಂದೆ ಕ್ರೇಜಿ ಅಂಕಲ್ ಚಿತ್ರದ ಟ್ರೇಲರ್ ಅನ್ನು ನಿರ್ಮಾಪಕರು ಬಿಡುಗಡೆ ಮಾಡಿದ್ದರು. ಇದಕ್ಕೆ ಉತ್ತಮವಾದ ಪ್ರತಿಕ್ರಿಯೆಯನ್ನು ನೀಡಿತ್ತು. ಈ ಚಿತ್ರದಲ್ಲಿ ಪುರುಷರು ಮಹಿಳೆಯರ ಹಿಂದೆ ಬೀಳುವುದನ್ನು ಕಾಣಬಹುದು ಮತ್ತು ಇದು ತುಂಬಾ ಹಾಸ್ಯ ಪ್ರಜ್ಞೆಯನ್ನು ಒಳಗೊಂಡಿದೆ.
ಇದರಲ್ಲಿ ಶ್ರೀಮುಖಿ ಪಾತ್ರದೊಂದಿಗೆ 50 ವಯಸ್ಸಿನ ಅಂಕಲ್ಸ್ ಚೆಲ್ಲಾಟವಾಡುವುದನ್ನು ಚಿತ್ರೀಸಲಾಗಿದೆ. ಇತ್ತೀಚಿನ ವರದಿಯ ಪ್ರಕಾರ ತೆಲಂಗಾಣ ಮಹಿಳಾ ಹಕ್ಕು ವೇದಿಕೆಯ ಹಲವಾರು ಮಹಿಳಾ ಕಾರ್ಯಕರ್ತರು ಕ್ರೇಜಿ ಅಂಕಲ್ಸ್ ತಂಡದ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮತ್ತು ಇದರಲ್ಲಿ ಮಹಿಳೆಯರನ್ನು ಅವಹೇಳನಕಾರಿಯಾಗಿ ಚಿತ್ರಿಸಿದೆ ಎಂದು ಆರೋಪಿಸಿದ್ದಾರೆ. ಹಾಗೂ ಈ ಚಿತ್ರವನ್ನು ನಿಷೇಧಿಸುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ




