Breaking NewsLatestಇತರ ಕ್ರೀಡೆಕ್ರೀಡೆ
ವಿಶ್ವ ಜೂನಿಯರ್ ಅಥ್ಲೆಟಿಕ್ಸ್; ಶೈಲಿ ಸಿಂಗ್ ಲಾಂಗ್ ಜಂಪ್ನಲ್ಲಿ ಫೈನಲ್ಗೆ

ನೈರೋಬಿ: ಇಲ್ಲಿ ನಡೆಯುತ್ತಿರುವ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ ನ ಲಾಂಗ್ ಜಂಪ್ ನಲ್ಲಿ ಭಾರತದ ಶೈಲಿ ಸಿಂಗ್ ಫೈನಲ್ ತಲುಪಿದ್ದಾರೆ.
U18 ವಿಭಾಗದಲ್ಲಿ ವಿಶ್ವದಲ್ಲೇ ನಂ.1 ಸ್ಥಾನ ಹೊಂದಿರುವ ಶೈಲಿ 6.40 ಮೀ. ದೂರಕ್ಕೆ ಜಿಗಿದು ಫೈನಲ್ ಪ್ರವೇಶಿಸಿದರು.

ಜಾನ್ಸಿಯ ಬಡ ಕುಟುಂಬದಿಂದ ಬಂದಿರುವ ಶೈಲಿ ಸಿಂಗ್ ಅವರ ತಾಯಿ ಟೈಲರಿಂಗ್ ಕೆಲಸ ಮಾಡಿ ಮಗಳನ್ನು ಉತ್ತಮ ಕ್ರೀಡಾಪಟುವನ್ನಾಗಿಸಲು ಶ್ರಮಿಸುತ್ತಿದ್ದಾರೆ. ಭಾರತದ ಶ್ರೇಷ್ಠ ಲಾಂಗ್ ಜಂಪ್ ತಾರೆ ಅಂಜು ಬಾಬಿ ಜಾರ್ಜ್ ಅವರ ಫೌಂಡೇಷನ್ ನಲ್ಲಿ ಶೈಲಿ ತರಬೇತಿ ಪಡೆಯುತ್ತಿದ್ದಾರೆ.
