ಉತ್ತರ ಕನ್ನಡಜಿಲ್ಲಾ ಸುದ್ದಿ

Fisherman: ಲೇಡಿಸ್ ಬೀಚ್ ನಲ್ಲಿ ಸಿಲುಕಿಕೊಂಡಿದ್ದ ಒಡಿಶಾ ಮೂಲದ ಮೀನುಗಾರನ ರಕ್ಷಣೆ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬೈತಖೋಲ್ ಸಮೀಪದ ಲೇಡಿಸ್ ಬೀಚ್ ನಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರ ಮರಳಿ ಬರಲಾಗದೇ ಮೂರು ದಿನದಿಂದ ಅನ್ನಹಾರವಿಲ್ಲದೇ ಸಿಲುಕಿದ್ದವನನ್ನು ಕರಾವಳಿ ಕಾವಲುಪಡೆ ರಕ್ಷಣೆ ಮಾಡಿದೆ.

ಒಡಿಶಾ ಮೂಲದ ನಿರ್ಮಲ್ ಕುಸಮ್ ( 45 ) ಎಂಬ ವ್ಯಕ್ತಿಯೇ ರಕ್ಷಣೆಗೊಳಗಾದ ಮೀನುಗಾರನಾಗಿದ್ದು, ಕಾರವಾರದ ಕರಾವಳಿ ಕಾವಲು ಪಡೆಯ ಸಿಪಿಐ ನಿಶ್ಚಲ್ ಕುಮಾರ್ ನೇತೃತ್ವದ ತಂಡ ರಕ್ಷಿಸಿ ಕಾರವಾರದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಒರಿಸ್ಸಾ ಮೂಲದ ನಿರ್ಮಲ್ ಕುಸಮ್ ಲೇಡಿಸ್ ಬೀಚ್ ಗೆ ಹೇಗೆ ತೆರಳಿದ್ದಾನೆ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.ಮೀನುಗಾರಿಕೆ ಕೆಲಸಕ್ಕಾಗಿ ಒರಿಸ್ಸಾದಿಂದ ಕಾರವಾರಕ್ಕೆ ಬಂದಿರುವುದಾಗಿ ಮಾತ್ರ ಮಾಹಿತಿ ನೀಡಿದ್ದಾನೆ. ಮೂರು ದಿನದ ಹಿಂದೆ ಲೇಡಿಸ್ ಬೀಚ್ ಬಳಿ ಮೀನುಗಾರಿಕೆಗೆ ತೆರಳಿದ್ದಾಗ ಅಲ್ಲಿಯೇ ಉಳಿದಿರುವ ಸಾಧ್ಯತೆ ಇದೆ.

ಕಳೆದ ಮೂರು ದಿನದಿಂದ ಉಪವಾಸ ಇದ್ದು,ಈ ಭಾಗದಲ್ಲಿ ದಿನ ಕಳೆದಿದ್ದಾನೆ. ಇನ್ನು ಕಾರವಾರದ ಕ್ರಿಮ್ಸ್ ಆಸ್ಪತ್ರೆಯಲ್ಲಿ ಈತ ಚೇತರಿಸಿಕೊಳ್ಳುತ್ತಿದ್ದು,ಹೆಚ್ಚಿನ ವಿವರ ತಿಳಿದು ಬರಬೇಕಿದೆ.

Related Articles

Leave a Reply

Your email address will not be published. Required fields are marked *

Back to top button