ಸಿನಿಮಾ

ಈ ಬಾಲಿವುಡ್ ನಟಿಯ ಜೊತೆ ನಟಿಸಲು ಉತ್ಸುಕರಾದ ನಟ ಅಲ್ಲು ಅರ್ಜುನ್

ಅಲ್ಲು ಅರ್ಜುನ್ ಅವರು ಈಗ ತಮ್ಮ ಮುಂಬರುವ ಚಿತ್ರ ‘ಪುಷ್ಪ’ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಇದು ಮುಗಿಯುವ ಹಂತದಲ್ಲಿದೆ. ಈ ಚಲನಚಿತ್ರವನ್ನು ನಿರ್ಮಾಪಕ ಸುಕುಮಾರ್ ನಿರ್ದೇಶನ ಮಾಡುತ್ತಿದ್ದು, ಇದರಲ್ಲಿ ರಶ್ಮಿಕಾ ಮಂದಣ್ಣ ಮತ್ತು ಮಲಯಾಳಂ ನಟಿ ಫಹದ್ ಫಾಸಿಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಈ ಚಿತ್ರದ ಜೊತೆಗೆ ನಟ ಅಲ್ಲು ಅರ್ಜುನ್ ಅವರು ದಿಲ್ ರಾಜು ‘ಐಕಾನ್’ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಇದನ್ನು ವಕೀಲ್ ಸಾಬ್ ಖ್ಯಾತಿಯ ವೇವು ಶ್ರೀರಾಮ್ ನಿರ್ದೇಶಿಸಿದ್ದಾರೆ. ಪ್ರಸ್ತುತ ಐಕಾನ್ ಚಿತ್ರದ ನಿರ್ಮಾಪಕರು ಉಳಿದ ಪಾತ್ರವರ್ಗ ಮತ್ತು ಸಿಬ್ಬಂದಿಗಳನ್ನು ಅಂತಿಮಗೊಳಿಸುವಲ್ಲಿ ನಿರತರಾಗಿದ್ದಾರೆ.

ಈ ನಡುವೆ ಇತ್ತೀಚಿಗೆ ಬಂದ ವರದಿಯ ಪ್ರಕಾರ ನಟ ಅಲ್ಲು ಅರ್ಜುನ್ ಅವರು ಬಾಲಿವುಡ್ ನಟಿಯೊಂದಿಗೆ ನಟಿಸಲು ಉತ್ಸಾಹ ತೋರುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಆ ಬಾಲಿವುಡ್ ನಟಿ ಬೇರೆ ಯಾರು ಅಲ್ಲ ನಟಿ ಜಾನ್ವಿ ಕಪೂರ್. ಅವರನ್ನು ಐಕಾನ್ ಚಿತ್ರದಲ್ಲಿ ನಾಯಕಿಯಾಗಿ ಸೇರಿಸಿಕೊಳ್ಳಲು ದಿಲ್ ರಾಜು ಅವರು ಸಾಕಷ್ಟು ಪ್ರಯತ್ನಿಸುತ್ತಾರೆ ಹಾಗಾಗಿ ನಟಿ ಜಾನ್ವಿ ಕಪೂರ್ ಅವರು ಈ ಚಿತ್ರದ ಭಾಗವಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Spread the love

Related Articles

Leave a Reply

Your email address will not be published. Required fields are marked *

Back to top button