ಕಲಬುರ್ಗಿಕಲೆಜಿಲ್ಲಾ ಸುದ್ದಿವಿಶೇಷ

ಎಂಬಿಎ ಪದವೀಧರನಿಂದ ಮಾದರಿ ಕಾರ್ಯ: ಪರಿಸರ ರಕ್ಷಣೆಯೊಂದಿಗೆ 30 ಕುಟುಂಬಕ್ಕೆ ಹೆಗಲುಕೊಟ್ಟ ಯುವಕ

ವೀರೇಶ ಚಿನಗುಡಿ

ಕಲಬುರಗಿ: ಆತ ಮುಗಿಸಿದ್ದು ಎಂಬಿಎ ಪದವಿ, ಕಂಪನಿಗಳಲ್ಲಿ ಕೆಲಸ ಮಾಡಿಕೊಂಡು ನೆಮ್ಮದಿಯ ಬದುಕು ಸಾಗಿಸಬಹುದಿತ್ತು. ಆದರೂ ಆತನಿಗೆ ಪರಿಸರದ ಮೇಲಿರುವ ಅಪಾರ ಪ್ರೀತಿ, ಕಾಳಜಿಯಿಂದ ಸ್ವಯಂ ಉದ್ಯೋಗ ಆರಂಭಿಸಿ ಸ್ವಂತ ಬದುಕು ಕಟ್ಟಿಕೊಳ್ಳುವುದಲ್ಲದೆ, ಇತರೆ ಹತ್ತಾರು ಜನರ ಜೀವನಕ್ಕೆ ಆಸರೆ ಆಗಿದ್ದಾರೆ. ಉದ್ಯೋಗ ಸೃಷ್ಟಿಸಿ ನಿರುದ್ಯೋಗಿ ಯುವತಿ, ಮಹಿಳೆಯರಿಗೆ ಮಾದರಿಯಾಗಿದ್ದಾರೆ.

ಇವರ ಹೆಸರು ಸಂಗಮೇಶ್, ಎಂಬಿಎ ಪದವಿಧರ‌. ಎಂಬಿಎ ಪದವಿ ಮುಗಿಸಿರುವ ಸಂಗಮೇಶ್, ಯಾವುದೋ ಒಂದು ಕಂಪನಿಯಲ್ಲಿ ಕೆಲಸ ಪಡೆದು ನೆಮ್ಮದಿಯ ಬದುಕು ಸಾಗಿಸಬಹುದಾಗಿತ್ತು. ಆದರೆ, ನಾನೊಬ್ಬನೇ ಬದುಕುವುದು ಮುಖ್ಯವಲ್ಲ ಅಂದುಕೊಂಡ ಸಂಗಮೇಶ್ ಅವರು, ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದು, ಸ್ವಯಂ ಉದ್ಯೋಗ ಆರಂಭಿಸಿ ಸುಮಾರು 30 ಕ್ಕೂ ಹೆಚ್ಚು ವಿದ್ಯಾರ್ಥಿನಿ, ಮಹಿಳೆಯರ ಕೈಗೆ ಕೆಲಸ ಕೊಟ್ಟಿದ್ದಾರೆ. ಆದಾಯ ನಿರೀಕ್ಷೆ ಮಾಡದ ಸಂಗಮೇಶ್, ಕಡಿಮೆ ದರದಲ್ಲಿ ಪರಿಸರ ಸ್ನೇಹಿ ಗಣೇಶ್ ಮೂರ್ತಿಗಳನ್ನು ತಯ್ಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಪಿಓಪಿ ಗಣೇಶ್ ಮೂರ್ತಿಗಳಿಗೆ 100 ರೂ. ದರ ಇದ್ರೆ ಸಂಗಮೇಶ್ ಅವರು ಆರಂಭಿಕ ಕೇವಲ 40 ರೂಪಾಯಿ ದರದಲ್ಲಿ ಪರಿಸರ ಸ್ನೇಹಿ ಮಣ್ಣಿನ ಗಣಪತಿ ಮೂರ್ತಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಗಣೇಶ ಮೂರ್ತಿ ಅಷ್ಟೇ ಅಲ್ಲದೆ ಮಣ್ಣಿನ ಅಡುಗೆ ಪಾತ್ರೆಗಳು, ಅಲಂಕಾರಿಕ ಉಪಕರಣಗಳನ್ನು ಮಾರಾಟ ಮಾಡುತ್ತಿದ್ದಾರೆ.

ಬುಕ್ಕಿಂಗ್ ಆರಂಭ:

ಕಲಬುರಗಿ ನಗರದ ಶರಣಬಸವೇಶ್ವರ ದೇವಸ್ಥಾನ ಹತ್ತಿರ ಯಂಕವ್ವ ಮಾರ್ಕೇಟ್ ನಲ್ಲಿ ಅಂಗಡಿ ಓಪನ್ ಮಾಡಿಕೊಂಡು ಮಣ್ಣಿನ ಗಣ್ಣಿನ ಗಣಪತಿಗಳನ್ನು ಸಿದ್ಧಪಡಿಸುತ್ತಿದ್ದಾರೆ. ಜೇಡಿ ಮಣ್ಣನ್ನು ಬಳಸಿಕೊಂಡು ಪರಿಸರ ಸ್ನೇಹಿ ಗಣಪಗಳನ್ನು ಕಳೆದ ಮೂರ್ನಾಲ್ಕು ವರ್ಷಗಳಿಂದ ಮಾರಾಟ ಮಾಡುತ್ತಿದ್ದಾರೆ‌. ಆದಾಯ ನೀರಿಕ್ಷಿಸದೆ ಪರಿಸರ ರಕ್ಷಣೆಗಾಗಿ ಶ್ರಮ ಪಡುತ್ತಿದ್ದಾರೆ. ಈಗಾಗಲೇ ಪರಿಸರ ಸ್ನೇಹಿ ಗಣೇಶನನ್ನು ಸಾವಿರಾರು ಮನೆಗಳಿಗೆ ತಲುಪಿಸುವಲ್ಲಿ ಯಶಸ್ವಿಯಾದ ಸಂಗಮೇಶ್ ಈ ವರ್ಷ ಕೂಡಾ ಬುಕ್ಕಿಂಗ್ ಆರಂಭಿಸಿದ್ದಾರೆ. ಅಲ್ಲದೆ ಕಲಬುರಗಿ ಭಾಗದಲ್ಲಿ ಮಹಿಳೆಯರಿಗೆ ಉದ್ಯೋಗ ನೀಡಲು ಹೇಳಿಕೊಳ್ಳುವಂತಹ ಕಂಪನಿಗಳಿಲ್ಲ‌. ಹೀಗಾಗಿ ಪರಿಸರ ಸಂರಕ್ಷಣೆ ಜೊತೆಗೆ ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ಸದುದ್ದೇಶದಿಂದ ಸಂಗಮೇಶ್ ಅವರು ಈ ಹೊಸ ಐಡಿಯಾಗೆ ಪ್ಲ್ಯಾನ್ ಮಾಡಿಕೊಂಡು ಮಣ್ಣಿನಿಂದ ತರಹೆವಾರಿ ಗೃಪಯೋಗಿ ವಸ್ತುಗಳನ್ನು ತಯ್ಯಾರಿಸುತ್ತಿದ್ದಾರೆ‌. ಅಂಡುಗೆ ಮಾಡಿಕೊಂಡು ಕೇವಲ ಮನೆಗೆ ಸೀಮಿತವಾಗಿರುತ್ತಿದ್ದ ಸುಮಾರು 30 ಕ್ಕೂ ಹೆಚ್ಚು ಗೃಹಿಣಿಯರು ಸಂಗಮೇಶ್ ಅವರ ಬಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಗಣೇಶ ಮೂರ್ತಿಗಳನ್ನು ತಮ್ಮ ಕಯ್ಯಾರೆ ಸಿದ್ದ ಪಡಿಸುವ ಮಹಿಳೆಯರು ಕೆಲಸ ಸಿಕ್ಕಿರುವ ಖುಷಿ ಜೊತೆಗೆ ಸಂಬಳವೂ ಸಿಗುತ್ತಿದೆ ಅಂತಾ ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

ಎಂಬಿಎ ಪದವೀಧರ ಸಂಗಮೇಶ್ ಅವರು ತಮ್ಮದೆ ಆದ ರೀತಿಯಲ್ಲಿ ಸ್ವಯಂ ಉದ್ಯೋಗ ಸೃಷ್ಟಿಸಿಕೊಂಡು ಪರಿಸರ ಸಂರಕ್ಷಣೆ ಮಾಡುತ್ತಿದ್ದಾರೆ‌. ಅಲ್ಲದೆ ತಾವು ಬದುಕುವುದರ ಜೊತೆಗೆ ಹತ್ತಾರು ಜನರ ಜೀವನಕ್ಕೂ ಕೆಲಸ ಕೊಟ್ಟು ಆಸರೆಯಾಗಿದ್ದಾರೆ. ನಿಜಕ್ಕೂ ಸಂಗಮೇಶ್ ಅವರ ಕಾರ್ಯ ಶ್ಲಾಘನೀಯ. ಓದಿದ್ರು ಕೆಲಸ ಸೀಗುತ್ತಿಲ್ಲ ಅಂತಾ ಗೊಣಗುವ ನಿರುದ್ಯೋಗ ಯುವಕ, ಯುವತಿಯರಿಗೆ ಸಂಗಮೇಶ್ ಅವರು ಸ್ವಯಂ ಉದ್ಯೋಗ ಸೃಷ್ಟಿಸಿಕೊಂಡು ಮತ್ತೊಬ್ಬರಿಗೆ ಕೆಲಸ ಕೊಟ್ಟಿದ್ದು ಮಾದರಿ.

Spread the love

Related Articles

Leave a Reply

Your email address will not be published. Required fields are marked *

Back to top button